
ಬೆಂಗಳೂರು: ಪಕ್ಷದ ಶಿಸ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ಕೇಂದ್ರೀಯ ಬಿಜೆಪಿ ಶಿಸ್ತು ಸಮಿತಿ ನೀಡಿದ್ದ ಶೋಕಾಸ್ ನೋಟಿಸ್ ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ನೀಡಿದ್ದಾರೆ.
72 ಗಂಟೆಗಳ ಒಳಗಾಗಿ ಶೋಕಾಸ್ ನೊಟಿಸ್ ಗೆ ಉತ್ತರ ನೀಡುವಂತೆ ಶಾಸಕ ಯತ್ನಾಳ್ ಗೆ ಶಿಸ್ತು ಸಮಿತಿ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಯತ್ನಾಳ್ 24 ಗಂಟೆಗಳಲ್ಲೇ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸುದೀರ್ಘ 9 ಪುಟಗಳ ಉತ್ತರವನ್ನು ಯತ್ನಾಳ್ ನೀಡಿದ್ದಾರೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ ರಾಜಕೀಯ ಮಾಡುತ್ತಿದ್ದು, ತಾವು ಯಾವುದೇ ಬಣ ರಾಜಕೀಯ ಮಾಡುತ್ತಿಲ್ಲ. ವಿಜಯೇಂದ್ರ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಕಾರ್ಯಕರ್ತರ ಭಾವನೆಗಳನ್ನು ವ್ಯಕಪಡಿಸಿದ್ದೇನೆ ಎಂದು ಉತ್ತರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ಹಿಂದಿನ ನೋಟಿಸ್ ಗೆ ತಾವು ನೀಡಿದ್ದ ಉತ್ತರದ ಮಾದರಿಯಲ್ಲೇ ಯತ್ನಾಳ್ ಈ ಬಾರಿಯೂ ನೋಟಿಸ್ ಗೆ ಉತ್ತರಿಸಿದ್ದಾರೆ ಎನ್ನಲಾಗಿದೆ.