ಬಿಜೆಪಿ – ಆರ್ಎಸ್ಎಸ್ ವಿರುದ್ಧ ಆಕ್ರೋಶ ಹೊರಹಾಕಿರುವ ಸಂಸದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆರ್.ಎಸ್.ಎಸ್. – ಬಿಜೆಪಿಯವರು ನಕಲಿ ಹಿಂದೂಗಳಾಗಿದ್ದಾರೆ. ಇವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಹಿಂದೂ ಧರ್ಮವನ್ನು ಬಳಕೆ ಮಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಸುಶಾಂತ್ ರನ್ನು ಕ್ರಿಕೆಟರ್ ಎಂದರಾ ರಾಹುಲ್….?
ದೆಹಲಿಯಲ್ಲಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸ್ಥಾಪನಾ ದಿನವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ನ ಸಿದ್ಧಾಂತಗಳು ಬಿಜೆಪಿ – ಆರ್.ಎಸ್.ಎಸ್.ಗೆ ವಿರುದ್ಧವಾಗಿದೆ. ಎರಡರಲ್ಲಿ 1 ಸಿದ್ಧಾಂತ ಮಾತ್ರ ದೇಶವನ್ನು ಆಳಬಲ್ಲದು ಎಂಧು ಹೇಳಿದ್ರು.
ಇವರೆಲ್ಲ ಯಾವ ರೀತಿಯ ಹಿಂದೂಗಳು..? ಇವರೆಲ್ಲ ನಕಲಿ ಹಿಂದೂಗಳಾಗಿದ್ದಾರೆ. ಇವರು ಹಿಂದೂ ಧರ್ಮವನ್ನು ಬಳಸಿಕೊಳ್ತಿದ್ದಾರೆ, ಧರ್ಮವನ್ನು ಬಳಸಿ ದಲ್ಲಾಳಿತನವನ್ನು ಮಾಡುತ್ತಿದ್ದಾರೆ. ಇವರ್ರ್ಯಾರು ನಿಜವಾದ ಹಿಂದೂಗಳೇ ಅಲ್ಲ. ಎಂದು ಹೇಳುವ ಮೂಲಕ ಬಿಜೆಪಿ ಹಾಗೂ ಆರ್.ಎಸ್.ಎಸ್.ನ್ನು ಜರಿದಿದ್ದಾರೆ.