ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿಧಾನಮಂಡಲದಲ್ಲಿ ಮಂಡಿಸಿದ ಪ್ರಸ್ತಕ್ತ ಸಾಲಿನ ಬಜೆಟ್ ಸುಳ್ಳುರಾಯಮಯ್ಯನ ಪೊಳ್ಳು ಬಜೆಟ್ ಎಂದು ವಿಪಕ್ಷ ಬಿಜೆಪಿ ಸದಸ್ಯರು ಕಿಡಿಕಾರಿದ್ದಾರೆ.
ಭಿತ್ತಿಪತ್ರಗಳನ್ನು ಹಿಡಿದು, ಏನಿಲ್ಲ ಏನಿಲ್ಲ ಸಿದ್ದರಾಮಯ್ಯ ಬಜೆಟ್ ನಲ್ಲಿ ಏನಿಲ್ಲ…ಎಂದು ಹಾಡು ಹಾಡುತ್ತ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ಸದಸ್ಯರು ಬಜೆಟ್ ಅಧಿವೇಶನದಿಂದ ಸಭಾತ್ಯಾಗ ಮಾಡಿದ್ದಾರೆ.
ಅಲ್ಲದೇ ಸಿಎಂ ಸಿದ್ದರಾಮಯ್ಯ ರೈತ ವಿರೋಧಿಯಾಗಿದ್ದು, ಬಜೆಟ್ ನಲ್ಲಿ ಕೃಷಿಗೆ ಪಂಗನಾಮ ಹಾಕಿದ್ದಾರೆ. ರೈತ ಪರವಾದ ಯಾವುದೇ ಘೋಷಣೆಗಳನ್ನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.