ನವದೆಹಲಿ: ಬಿಜೆಪಿ ಬಣ ಬಡಿದಾಟ ದೆಹಲಿ ಅಂಗಳ ತಲುಪಿದೆ. ಶಾಸಕ ಯತ್ನಾಳ್ ಬಣದ ಟೀಂ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಒಂದು ಸುತ್ತಿನ ಮಾತುಕತೆ ನಡೆಸಿದೆ.
ಹೈಕಮಾಂಡ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ನಿನ್ನೆ ರಾತ್ರಿಯೇ ನಾವು ಬಿಜೆಪಿ ರಾಜ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಹೈಕಮಾಂಡ್ ನಾಯಕರಿಂದ ನಮಗೆ ಶಹಭಾಸ್ ಗಿರಿ ಸಿಕ್ಕಿದೆ ಎಂದರು.
ಎಲ್ಲಾ ವಿಚಾರಗಳನ್ನು ಹೈಕಮಾಂಡ್ ನಾಯಕರ ಬಳಿ ಮನವರಿಕೆ ಮಾಡಿದ್ದೆವೆ. ಅಂತಿಮವಾಗಿ ವರಿಷ್ಠರು ಕೈಗೊಳ್ಳುವ ನಿರ್ಧರಕ್ಕೆ ತಲೆಭಾಗುತ್ತೇವೆ. ಅಂತಿಮ ಹಂತದ ಚರ್ಚೆ ಹಿನ್ನೆಲೆಯಲ್ಲಿ ನಾವು ಹೆಚ್ಚೇನು ಮಾತನಾಡಲ್ಲ. ವರಿಷ್ಠರು ಏನು ತೀರ್ಮಾ ಕೈಗೊಳ್ಳುತ್ತಾರೆ ಅದಕ್ಕೆ ನಾವು ಬದ್ಧರಾಗಿರುತೇವೆ ಎಂದರು.