
ನವದೆಹಲಿ: ಭಾರತೀಯ ಜನತಾ ಪಕ್ಷದ(ಬಿಜೆಪಿ) ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪತ್ನಿಗೆ ಸೇರಿದ ಕಾರ್ ಅನ್ನು ಆಗ್ನೇಯ ದೆಹಲಿಯ ಗೋವಿಂದಪುರಿ ಪ್ರದೇಶದಿಂದ ಕಳವು ಮಾಡಲಾಗಿದೆ. ಗೋವಿಂದಪುರಿಯಲ್ಲಿರುವ ಸೇವಾ ಕೇಂದ್ರದಲ್ಲಿ ಊಟಕ್ಕೆ ಮನೆಗೆ ಹೋಗುವಾಗ ವಾಹನವನ್ನು ಚಾಲಕನಿಗೆ ವಹಿಸಲಾಗಿತ್ತು.
ಹಿಂತಿರುಗಿ ನೋಡಿದಾಗ ಕಾರ್ ನಾಪತ್ತೆಯಾಗಿರುವುದು ಗೊತ್ತಾಯಿತು. ದೂರನ್ನು ಸ್ವೀಕರಿಸಿದ ನಂತರ, ದೆಹಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಾರ್ ಗುರುಗ್ರಾಮ್ ಕಡೆಗೆ ಹೋಗುತ್ತಿರುವುದನ್ನು ಬಹಿರಂಗಪಡಿಸಿದೆ. ಆದರೆ, ಸದ್ಯಕ್ಕೆ ಕಾರ್ ಪತ್ತೆಯಾಗಿಲ್ಲ.
ಘಟನೆ ಮಾರ್ಚ್ 19 ರಂದು ನಡೆದಿದ್ದು, ಹಿಮಾಚಲ ಪ್ರದೇಶ ನೋಂದಣಿ ಸಂಖ್ಯೆ HP-03-D-0021 ಹೊಂದಿರುವ ಬಿಳಿ ಬಣ್ಣದ ಫಾರ್ಚುನರ್ ಕಳವಾಗಿದ್ದು, ಚಾಲಕ ಜೋಗಿಂದರ್ ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಕಾರ್ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
