ಬೆಂಗಳೂರು : ‘ಗೋ ಹತ್ಯೆ’ ಮಾಡಿದರೆ ಸರ್ಕಲ್ನಲ್ಲಿ ನಿಲ್ಲಿಸಿ ಗುಂಡು ಹಾಕುತ್ತೇವೆ ಎಂಬ ಸಚಿವ ಮಂಕಾಳು ವೈದ್ಯ ಹೇಳಿಕೆಗೆ ಬಿಜೆಪಿ ಪ್ರಶಂಸೆ ವ್ಯಕ್ತಪಡಿಸಿದೆ.
ಗೋ ಹತ್ಯೆ ಮಾಡಿದರೆ ಸರ್ಕಲ್ನಲ್ಲಿ ನಿಲ್ಲಿಸಿ ಗುಂಡು ಹಾಕುತ್ತೇವೆ ಎಂಬ ಕಾಂಗ್ರೆಸ್ ಸಚಿವ ಮಂಕಾಳು ವೈದ್ಯ ಅವರ ಹೇಳಿಕೆ ಪ್ರಶಂಸನೀಯವಾದುದು. ಗೋಹತ್ಯೆಯ ವಿರುದ್ಧ ಬಿಜೆಪಿ ಪ್ರಬಲವಾಗಿ ಧ್ವನಿ ಎತ್ತುತ್ತಲೇ ಬಂದಿದೆ. ಗೋಹತ್ಯೆಯ ವಿರುದ್ಧವಾಗಿ ಗೋ ಹತ್ಯಾ ನಿಯಂತ್ರಣ ಕಾನೂನನ್ನು ಬಿಜೆಪಿ ಜಾರಿಗೊಳಿಸಿತ್ತು. ಇದೀಗ ಕಾಂಗ್ರೆಸ್ ಸಚಿವರೇ ಗೋ ಹತ್ಯೆಯ ವಿರುದ್ಧ ನೀಡಿರುವ ಹೇಳಿಕೆಯನ್ನು ಬಿಜೆಪಿ ಗೌರವಿಸುತ್ತದೆ. ಭಾರತದ ಸಂಸ್ಕೃತಿಯಲ್ಲಿ ಗೋವಿಗೆ ಪೂಜನೀಯ ಸ್ಥಾನ ನೀಡಲಾಗಿದೆ. ಗೋವು ಮಾತೆಗೆ ಸಮಾನ ಎಂದು ಗೌರವಿಸಲಾಗುತ್ತದೆ.
ಗೋ ಹತ್ಯೆಯ ವಿರುದ್ಧ ಬಿಜೆಪಿ ನಿಂತಿದ್ದರೆ, ಕಾಂಗ್ರೆಸ್ ಮಾತ್ರ ಬಾಂಧವರ ಮತಬ್ಯಾಂಕಿಗಾಗಿ ಗೋ ಹತ್ಯೆಯನ್ನು ಹಕ್ಕು ಎಂದು ಪ್ರತಿಪಾದಿಸುತ್ತಿತ್ತು, ಬೀದಿಯಲ್ಲಿ ಗೋವಿನ ಹತ್ಯೆ ಮಾಡಿ ವಿಕೃತಿ ಮೆರೆದಿತ್ತು. ಇದೀಗ ಸ್ವತಃ ಕಾಂಗ್ರೆಸ್ ಸಚಿವರೇ ಗೋ ಹತ್ಯೆಯ ವಿರುದ್ಧ ನೀಡಿರುವ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಇರಿಸುಮುರಿಸು ತರಿಸಿದೆ. ವಿರೋಧ ಪಕ್ಷವಾಗಿ ಬಿಜೆಪಿಯು, ಸಚಿವ ಮಂಕಾಳು ವೈದ್ಯ ಅವರ ಹೇಳಿಕೆಯನ್ನು ಬೆಂಬಲಿಸುತ್ತದೆ. ಕಾಂಗ್ರೆಸ್ ನಾಯಕರಿಗೆ ತಮ್ಮ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಧಮ್ ಇದೆಯಾ? ಎಂದು ಕಿಡಿಕಾರಿದೆ.
ಗೋ ಹತ್ಯೆ ಮಾಡಿದರೆ ಸರ್ಕಲ್ನಲ್ಲಿ ನಿಲ್ಲಿಸಿ ಗುಂಡು ಹಾಕುತ್ತೇವೆ ಎಂಬ @INCKarnataka ಸಚಿವ ಮಂಕಾಳು ವೈದ್ಯ ಅವರ ಹೇಳಿಕೆ ಪ್ರಶಂಸನೀಯವಾದುದು. ಗೋಹತ್ಯೆಯ ವಿರುದ್ಧ ಬಿಜೆಪಿ ಪ್ರಬಲವಾಗಿ ಧ್ವನಿ ಎತ್ತುತ್ತಲೇ ಬಂದಿದೆ. ಗೋಹತ್ಯೆಯ ವಿರುದ್ಧವಾಗಿ ಗೋ ಹತ್ಯಾ ನಿಯಂತ್ರಣ ಕಾನೂನನ್ನು ಬಿಜೆಪಿ ಜಾರಿಗೊಳಿಸಿತ್ತು. ಇದೀಗ ಕಾಂಗ್ರೆಸ್ ಸಚಿವರೇ ಗೋ… pic.twitter.com/s4qcii0bFF
— BJP Karnataka (@BJP4Karnataka) February 5, 2025