ಬೆಳಗಾವಿ: ಬಿಜೆಪಿಯವರು ಡ್ರಾಮಾ ಕಂಪನಿಯಂತೆ ವರ್ತಿಸುತ್ತಿದ್ದಾರೆ. ಬಾಯಿಗೆ ಬಂದಂತೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗರಂ ಆಗಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಮುನಿರತ್ನ ಮೇಲೆ ಮೊತ್ಟೆ ಎಸೆತ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುತ್ತಾ, ಮೊಟ್ಟೆ ಎಸೆತ ಏನೋ ಘಟನೆ ಆಗಿದೆ. ಪೊಲೀಸರು ಕಾನೂನು ಪ್ರಕಾರ ತನಿಖೆ ನಡೆಸುತ್ತಿದ್ದಾರೆ. ಆದರೆ ಮುನಿರತ್ನ, ಮೊಟ್ಟೆ ದಾಳಿಯನ್ನು ಆಸಿಡ್ ದಾಳಿ ಎನ್ನುವುದು, ಬಾಯಿಗೆ ಬಂದಂತೆ ಯಾರಂದೆರೆ ಯಾರ ಮೇಲೆ ಆರೋಪಗಳನ್ನು ಮಾಡುವುದು ಮಡುತ್ತಿದ್ದಾರೆ. ಇಂತಹ ಆರೋಪಗಳು ಸರಿಯಲ್ಲ ಎಂದು ಗುಡುಗಿದರು.
ಸಿ.ಟಿ.ರವಿ, ಮುನಿರತ್ನ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಕಪೋಲಕಲ್ಪಿತ ಮಾತು ಸೇರಿಸುವುದು ನ್ಯಾಯವಲ್ಲ. ಮುನಿರತ್ನ ಹೆಣ್ಣುಮಗಳು ಕುಸುಮಾ ಬಗ್ಗೆ ವ್ಯಂಗ್ಯವಾಗಿ ಮಾತನಾಡಿರುವುದು ಸರಿಯಲ್ಲ. ಮುನಿರತ್ನ ತಾವೇ ಹಲ್ಲೆ ಮಾಡಿಸಿಕೊಂಡಿರಲೂಬಹುದು ಎಂದು ವಾಗ್ದಾಳಿ ನಡೆಸಿದರು.