ಬಿಜೆಪಿ ಸಂಸದ ವರುಣ್ ಗಾಂಧಿ ಅವರಿಗೆ ಕೋವಿಡ್ ಸೋಂಕು ದೃಢವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ವರುಣ್, ಕೊರೋನಾ ಪಾಸಿಟಿವ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದು, ಬಲವಾದ ರೋಗಲಕ್ಷಣಗಳು ಕಾಡುತ್ತಿವೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಇದರ ಜೊತೆಗೆ ಎಲೆಕ್ಷನ್ ಕಮಿಷನ್ ಬಳಿ ಮನವಿಯೊಂದನ್ನ ಮಾಡಿರುವ ವರುಣ್, ನಾವೀಗ ಮೂರನೇ ಅಲೆ ಹಾಗೂ ಐದು ಪ್ರಮುಖ ರಾಜ್ಯಗಳ ಚುನಾವಣೆಯ ಮಧ್ಯದಲ್ಲಿ ಸಿಲುಕಿದ್ದೇವೆ. ಚುನಾವಣೆಯು ಸುರಕ್ಷಿತವಾಗಿ ನಡೆಯಬೇಕೆಂದರೆ, ಚುನಾವಣಾ ಆಯೋಗ ಎಲೆಕ್ಷನ್ ನಲ್ಲಿ ಭಾಗವಹಿಸುತ್ತಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಕಾರ್ಯಕರ್ತರಿಗೂ ಮುನ್ನೆಚ್ಚರಿಕಾ ಡೋಸ್ ಅಥವಾ ಬೂಸ್ಟರ್ ಡೋಸ್ ನೀಡಬೇಕೆಂದು ಮನವಿ ಮಾಡಿದ್ದಾರೆ.
ಶನಿವಾರ ಪಂಚ ರಾಜ್ಯಗಳ ಚುನಾವಣಾ ದಿನಾಂಕವನ್ನು ಘೋಷಿಸಿರುವ ಚುನಾವಣಾ ಆಯೋಗ, ಕೊರೋನಾ ಸಾಂಕ್ರಾಮಿಕದ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಕಠಿಣ ನಿರ್ಬಂಧಗಳನ್ನ ಏರಿದೆ. ಚುನಾವಣಾ ಪ್ತಚಾರದಿಂದ ಹಿಡಿದು, ಮತಗಟ್ಟೆಯವರೆಗೆ ಕೊರೋನಾ ನಿಯಮಗಳನ್ನ ಎಲ್ಲರು ಪಾಲಿಸಬೇಕು ಎಂದು ಆದೇಶಿಸಿದೆ. ರ್ಯಾಲಿಗಳನ್ನ ನಿರ್ದಿಷ್ಟ ಸಮಯದವರೆಗೂ ನಡೆಸದಂತೆ ಆದೇಶಿಸಿದೆ. ಲಸಿಕೆ ಪಡೆಯಲು ಮತದಾರರನ್ನ ಹುರಿದುಂಬಿಸಿದೆ. ಜೊತೆಗೆ ಯಾರು ಭಯಪಡುವ ಅಗತ್ಯವಿಲ್ಲ, ಮತಗಟ್ಟೆ ಹಾಗೂ ಅಲ್ಲಿನ ಅಧಿಕಾರಿಗಳು ನಿಮ್ಮ ಸುರಕ್ಷತೆಗೆ ಆದ್ಯತೆ ನೀಡುತ್ತಾರೆ ಎಂದು ಆಯುಕ್ತ ಸುಶೀಲ್ ಕುಮಾರ್ ಭರವಸೆ ನೀಡಿದ್ದಾರೆ.