
ರಾಜ್ಯ ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳ ಕುರಿತು ಟೀಕೆ ಮಾಡುತ್ತಿದ್ದ ಬಿಜೆಪಿ, ಇದೀಗ ಮಹಿಳೆಯರಿಗೆ ಉಚಿತ ಬಸ್ ಯೋಜನೆಯಿಂದ ಆಗುತ್ತಿರುವ ನಷ್ಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
“ಸಾರಿಗೆ ನಿಗಮಗಳು ಭರ್ಜರಿ ಲಾಭದಲ್ಲಿವೆ ಎಂದು ಪುಂಗಿ ಊದಿದ ಸಚಿವ ರಾಮಲಿಂಗ ರೆಡ್ಡಿ ಅವರೇ, ಇದೇನು ಸಾಲದ ಸುಳಿಯಲ್ಲಿ ಸಾರಿಗೆ ನಿಗಮಗಳನ್ನು ಸಿಲುಕಿಸುತ್ತಿದ್ದೀರಿ.
ಕೆಎಸ್ಆರ್ಟಿಸಿ ನಂತರ ಇದೀಗ ಬಿಎಂಟಿಸಿ ಬರೋಬ್ಬರಿ 589.20 ಕೋಟಿ ರೂ. ಸಾಲಕ್ಕಾಗಿ ಭಿಕ್ಷೆ ಬೇಡುತ್ತಿದೆ. ರಾಜ್ಯದ ನಾಲ್ಕು ನಿಗಮಗಳು ಒಟ್ಟು 2,000 ಕೋಟಿ ರೂ. ಸಾಲ ಪಡೆಯಲಿವೆ.
ಕನ್ನಡಿಗರ ತೆರಿಗೆ ಹಣವನ್ನು ಲೂಟಿ ಮಾಡಿ ಖಜಾನೆ ಖಾಲಿ ಮಾಡಿರುವ ಕಾಂಗ್ರೆಸ್ ಸರ್ಕಾರ ಇದೀಗ ಸಾರಿಗೆ ನಿಗಮಗಳ ಮೂಲಕ ಸಾಲದ ರೂಪದಲ್ಲಿ ಲೂಟಿ ಹೊಡೆಯಲು ಮುಂದಾಗಿದೆ” ಎಂದು ಹೇಳಿದೆ.
