ಪಶ್ಚಿಮ ಬಂಗಾಳದ ಬಿಷ್ಣುಪುರದ ಬಿಜೆಪಿ ಶಾಸಕ ತನ್ಮೊಯ್ ಘೋಷ್ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಕೇಸರಿ ಪಾಳಯವು ಪ್ರತೀಕಾರದ ರಾಜಕೀಯದಲ್ಲಿ ತೊಡಗಿಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ರು.
ಬಿಜೆಪಿ ಸೇಡಿನ ರಾಜಕಾರಣ ಮಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ. ಇದೇ ಕಾರಣಕ್ಕೆ ತಾವು ಪಕ್ಷ ತೊರೆದಿರೋದಾಗಿ ತನ್ಮೊಯ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಒಳಿತಿಗಾಗಿ ಪ್ರತಿಯೊಬ್ಬರು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಬೇಕು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕೈಗೆ ನಾವೆಲ್ಲ ಬಲ ತುಂಬಬೇಕಿದೆ ಎಂದು ಹೇಳಿದ್ರು.
ಈ ಮೊದಲು ಟಿಎಂಸಿಯಲ್ಲೇ ಇದ್ದ ತನ್ಮೊಯ್ ಮಾರ್ಚ್ ತಿಂಗಳಲ್ಲಿ ಅಂದರೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಮುಂಚಿತವಾಗಿ ಬಿಜೆಪಿ ಸೇರ್ಪಡೆಯಾಗಿದ್ದರು. ಆಗ ಅವರು ಬಂಕುರಾ ಜಿಲ್ಲೆಯ ಬಿಷ್ಣುಪುರದಲ್ಲಿ ಟಿಎಂಸಿ ಯುವ ಪಾಳಯದ ಅಧ್ಯಕ್ಷರಾಗಿದ್ದರು ಆಗೂ ಸ್ಥಳೀಯ ಕೌನ್ಸಿಲರ್ ಕೂಡ ಆಗಿದ್ದರು.
ತನ್ಮೊಯ್ರನ್ನು ಪಕ್ಷಕ್ಕೆ ಬರಮಾಡಿಕೊಂಡ ಪಶ್ಚಿಮ ಬಂಗಾಳ ಶಿಕ್ಷಣ ಸಚಿವ ಭ್ರತ್ಯ ಬಸು ಬಿಜೆಪಿಯು ಟಿಎಂಸಿ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದೆ ಎಂದು ಹೇಳಿದ್ರು.
ನಾವು ರಾಜಕೀಯವಾಗಿ ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇವೆ. ಬಿಜೆಪಿಯ ಅನೇಕ ನಾಯಕರು ಟಿಎಂಸಿ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಬಸು ಹೇಳಿದ್ದಾರೆ.