ಉತ್ತರಪ್ರದೇಶದ ಬಿಜೆಪಿ ಶಾಸಕಿಯೊಬ್ಬರು ಅಪಘಾತಕ್ಕೆ ಒಳಗಾಗಿದ್ದ ಇಬ್ಬರನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಅವರಿಬ್ಬರಿಗೆ ಜೀವದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗುರುವಾರ ಶಾಸಕಿ ಸಲೋನ ಕುಶ್ವಾಹ ಅವರು ಶಹಜಾನ್ ಪುರದಿಂದ ತಿಹಾರ್ ನಗರಕ್ಕೆ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ವಾಹನದಲ್ಲಿ ತೆರಳುತ್ತಿದ್ದರು.
ಖುದಗನಿ ಮಾರ್ಗ್ ನಲ್ಲಿನ ರಸ್ತೆಯಲ್ಲಿ ಅಪಘಾತ ಸಂಭವಿಸಿ ಇಬ್ಬರು ವ್ಯಕ್ತಿಗಳು ಗಾಯಗೊಂಡು ಬಿದ್ದಿದ್ದನ್ನು ನೋಡಿದ್ದಾರೆ. ನಿರ್ಜನ ಪ್ರದೇಶವಾಗಿದ್ದರೂ ತಮ್ಮ ಸುರಕ್ಷತೆಯ ವಿಚಾರವನ್ನೂ ಗಮನಿಸದೇ ಸಲೋನಾ ಅವರು ತಾವು ನಿರ್ಜನ ಪ್ರದೇಶದಲ್ಲಿಯೇ ಉಳಿದುಕೊಂಡು ತಮ್ಮ ಭದ್ರತಾ ಸಿಬ್ಬಂದಿ ಮತ್ತು ಚಾಲಕನ ನೆರವಿನಿಂದ ಗಾಯಗೊಂಡಿದ್ದವರನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಹಳ್ಳಿ ಮನೆಯ ಒಲೆಗಳಲ್ಲಿ ಅಜ್ಜಿ ಮಾಡುತ್ತಿದ್ದ ಹುಣಸೇ ಗೊಡ್ಡು ಸಾರು…..!
ಈ ಘಟನೆ ಬಗ್ಗೆ ಅವರು ಅಂಬುಲೆನ್ಸ್ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿದ ಸಂದೇಶ ಬಂದ ನಂತರವೇ ಅವರು ಬೇರೊಂದು ವಾಹನದಲ್ಲಿ ಅಲ್ಲಿಂದ ನಿರ್ಗಮಿಸಿದ್ದಾರೆ.
ಈ ಶಾಸಕಿ ಕಷ್ಟದಲ್ಲಿರುವವರಿಗೆ ನೆರವಾಗಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅಗ್ನಿ ಅವಘಡ ಸಂಭವಿಸಿದ ಕಟ್ಟಡವೊಂದರಿಂದ ಕುಟುಂಬವನ್ನು ರಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.