ಪಂಚರಾಜ್ಯಗಳ ಚುನಾವಣೆಯಲ್ಲಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ ಪಂಜಾಬ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಆಪ್ ಮರ್ಮಾಘಾತ ಕೊಡಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಉತ್ತರಾಖಂಡ ಮತ್ತು ಗೋವಾದಲ್ಲಿ ತೀವ್ರ ಪೈಪೋಟಿ ಕಂಡು ಬಂದರೆ ಮಣಿಪುರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸಮೀಕ್ಷೆ ತಿಳಿಸುತ್ತದೆ.
ಉತ್ತರ ಪ್ರದೇಶದಲ್ಲಿ 225-237 ಸೀಟುಗಳನ್ನು ಗೆದ್ದು ಬಿಜೆಪಿ ಸರಳ ಬಹುಮತ ಪಡೆದರೆ, ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಗೆ 139-155 ಸೀಟುಗಳು ಹಾಗೂ ಬಿಎಸ್‌ಪಿಗೆ 13-21 ಸೀಟುಗಳು ಲಭಿಸಿ, ಕಾಂಗ್ರೆಸ್ 4-8 ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ ಎಂದು ಸಮೀಕ್ಷಾ ವರದಿ ಸೂಚಿಸಿದೆ.
ಗಲ್ವಾನ್‌ನಲ್ಲಿ ಗಾಯಗೊಂಡ ಯೋಧನ ಕೈಯಲ್ಲಿ ಒಲಿಂಪಿಕ್ ಟಾರ್ಚ್: ಚೀನಾದ ಸಮರ್ಥನೆ
ಪಂಜಾಬ್‌ನಲ್ಲಿ 55-60 ಕ್ಷೇತ್ರಗಳಲ್ಲಿ ಆಪ್ ಗೆಲ್ಲುವ ಸಾಧ್ಯತೆ ಇದ್ದು, ಆಡಳಿತಾರೂಢ ಕಾಂಗ್ರೆಸ್ 24-30 ಕ್ಷೇತ್ರಗಳಿಗೆ ಕುಸಿಯುವ ಅಂದಾಜಿದೆ. ಅಕಾಲಿ ದಳ 20-26 ಕ್ಷೇತ್ರಗಳಲ್ಲಿ ಗೆದ್ದರೆ, ಬಿಜೆಪಿ-ಅಮರೀಂದರ್ ಸಿಂಗ್ ಜೋಡಿ 3-11 ಕ್ಷೇತ್ರಗಳನ್ನಷ್ಟೇ ಗೆಲ್ಲುವ ಸಾಧ್ಯತೆ ಇದೆ.
ಉತ್ತರಾಖಂಡದಲ್ಲಿ ಬಿಜೆಪಿಗೆ 31-37 ಸೀಟುಗಳು ಲಭಿಸುವ ಸಾಧ್ಯತೆ ಇದ್ದರೆ, ಕಾಂಗ್ರೆಸ್ 30-36 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯೊಂದಿಗೆ ತೀವ್ರ ಹಣಾಹಣಿಯ ಮುನ್ಸೂಚನೆ ನೀಡಿದೆ.
ಮತ್ತೊಮ್ಮೆ ಸ್ಪಷ್ಟ ಬಹುಮತ ಕಾಣದೇ ಇರುವಂತೆ ತೋರುತ್ತಿರುವ ಗೋವಾದಲ್ಲಿ ಬಿಜೆಪಿಗೆ 14-18 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್‌ಗೆ 10-14 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳು ಇರುವುದಾಗಿ ಸಮೀಕ್ಷೆ ತಿಳಿಸಿದೆ.
ಇನ್ನು 60 ಸದಸ್ಯಬಲದ ಮಣಿಪುರ ವಿಧಾನ ಸಭೆಯಲ್ಲಿ ಬಿಜೆಪಿ 21-25 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 17-26 ಕ್ಷೇತ್ರಗಳಲ್ಲಿ ಗೆದ್ದುಬರುವ ನಿರೀಕ್ಷೆಯಿದ್ದು, ಬಿಜೆಪಿ ಸರ್ಕಾರ ರಚಿಸುವ ಅಂದಾಜಿದೆ ಎಂದು ಸಮೀಕ್ಷೆ ಹೇಳುತ್ತಿದೆ.