ಬೆಂಗಳೂರು : ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು” ಎಂಬ ಗಾದೆ ಬಿಜೆಪಿ ನೋಡಿಯೇ ಮಾಡಿರಬಹುದು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಗೆ ಟಾಂಗ್ ನೀಡಿದೆ.
ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು” ಎಂಬ ಗಾದೆಯನ್ನು ಬಿಜೆಪಿಯನ್ನು ನೋಡಿಯೇ ಸೃಷ್ಟಿಸಿದ್ದಿರಬಹುದು! ಬಿಜೆಪಿಯಲ್ಲಿ ವಿರೋಧ ಪಕ್ಷಕ್ಕೊಂದು ವಿರೋಧ ಪಕ್ಷ ಸೃಷ್ಟಿಯಾಗಿದೆ!
ಅಶೋಕ್ ಅವರೇ, ಇದೆಂತಹಾ ಸ್ಥಿತಿ ನಿಮ್ಮದು, ಶಾಸಕಾಂಗ ಪಕ್ಷದ ನಾಯಕನಾಗಿ ನಿಮ್ಮದೇ ಪಕ್ಷದವರಿಂದ ಕನಿಷ್ಠ ಗೌರವ ಸಿಗುತ್ತಿಲ್ಲ, ಸಿಗುತ್ತಿರುವುದು ಅವಾಚ್ಯ ಬೈಗುಳಗಳು ಮಾತ್ರ! ಕೆಲವರು ವಿಪಕ್ಷ ನಾಯಕನನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೆ ಧರಣಿ ನೆಡೆಸುತ್ತಾರೆ, ಇನ್ನೂ ಕೆಲವರಿಗೆ ಏನು ಮಾಡಬೇಕು, ಯಾರ ಮಾತು ಕೇಳಬೇಕು ಎಂಬ ಗೊಂದಲವಿದೆ. ಒಟ್ಟಿನಲ್ಲಿ ಬಿಜೆಪಿ ಅಧಿವೇಶನಕ್ಕೆ ಬಂದಿರುವುದು ಉತ್ತರ ಕುಮಾರನ ಸೈನ್ಯ ಯುದ್ಧಕ್ಕೆ ಬಂದಂತಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಗೆ ಟಾಂಗ್ ನೀಡಿದೆ.
ಇನ್ನೊಂದು ಟ್ವೀಟ್ ನಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಸಿಎಂ ಆಯ್ಕೆ ಮಾಡಿದ್ದಾಯ್ತು, ಸಿಎಂ ಹಾಗೂ ಸಚಿವರ ಪ್ರಮಾಣವಚನ ಸ್ವೀಕರಿಸಿಯೂ ಆಯ್ತು. ಆದರೆ ಇತರ ಮೂರು ರಾಜ್ಯಗಳಲ್ಲಿ ಒಂದು ರಾಜ್ಯದಲ್ಲೂ ಮುಖ್ಯಮಂತ್ರಿ ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು 6 ತಿಂಗಳು ತೆಗೆದುಕೊಂಡಂತೆ ಅಲ್ಲೂ 6 ತಿಂಗಳ ನಂತರ ಸಿಎಂ ಆಯ್ಕೆಯಾಗಬಹುದೇನೋ! ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಗೆ ಟಾಂಗ್ ನೀಡಿದೆ.