
ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ಗೆ ತೆರಳುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಬೆಂಗಾವಲು ವಾಹನಕ್ಕೆ ಕಲ್ಲು ತೂರಲಾಗಿದೆ ಎಂದು ಬಂಗಾಳ ಬಿಜೆಪಿ ಮುಖಂಡ ದಿಲೀಪ್ ಘೋಷ್ ಮಾಹಿತಿ ನೀಡಿದ್ದಾರೆ.
ಕೈಲಾಶ್ ವಿಜಯವರ್ಗಿಯವರ ಬೆಂಗಾವಲು ವಾಹನಕ್ಕೂ ಕಲ್ಲು ಎಸೆಯಲಾಗಿದೆ. ಈ ಘಟನೆ ನಡೆಯುವುದಕ್ಕೂ ಮುನ್ನ ಅಂದರೆ ಬುಧವಾರದಂದು ಜೆ.ಪಿ ನಡ್ಡಾ ಭಾಗಿಯಾಗಿದ್ದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ದಿಲೀಪ್ ಘೋಷ್ ಭದ್ರತಾ ಕೊರತೆ ಬಗ್ಗೆ ಆರೋಪ ಮಾಡಿದ್ದರು. ಇದಾದ ಬಳಿಕವೂ ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿರೋದ್ರಿಂದ ಪೊಲೀಸರ ಮೇಲೆ ದಿಲೀಪ್ ಘೋಷ್ ಟ್ವಿಟರ್ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.