
ಬೆಂಗಳೂರು: ಬಿಜೆಪಿ ನಾಯಕನಿಗೆ ಹನಿ ಟ್ರ್ಯಾಪ್ ಮಾಡಿ ಎರಡು ಕೋಟಿ ರೂಪಾಯಿ ಕೊಡುವಂತೆ ಬ್ಲಾಕ್ಮೇಲ್ ಮಾಡಿದ ಘಟನೆ ನಡೆದಿದ್ದು, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ್ಯೋತಿ, ಧರ್ಮೇಂದ್ರ ಮತ್ತು ಬಾಲು ಎಂಬುವರ ವಿರುದ್ಧ ಬಿಜೆಪಿ ನಾಯಕ ದೂರು ನೀಡಿದ್ದಾರೆ. ಹೊಳೆನರಸಿಪುರದ ಜ್ಯೋತಿ, ಅವರ ಪತಿ ಧರ್ಮೇಂದ್ರ ಮತ್ತು ಸ್ನೇಹಿತ ಬಾಲು ಸೇರಿಕೊಂಡು ವಿಡಿಯೋ ಕಾಲ್ ಮಾಡಿದ್ದು, ಅಶ್ಲೀಲ ವಿಡಿಯೋ ತೋರಿಸಿ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ರೆಕಾರ್ಡ್ ಮಾಡಿದ ವಿಡಿಯೋ ವೈರಲ್ ಮಾಡದೇ ಇರಲು ಎರಡು ಕೋಟಿ ಕೊಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.