ಗೋವಾ: ಮಾಡೆಲ್ ಕಮ್ ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಹಾಯಕರ ವಿರುದ್ಧ ಹತ್ಯೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಸೋನಾಲಿ ಪೊಗಟ್ ಶವದ ಮೇಲೆ ಹಲವು ಗಾಯದ ಗುರುತು ಪತ್ತೆಯಾಗಿವೆ. ಪೋಸ್ಟ್ ಮಾರ್ಟಂ ನಡೆಸಿದ ನಂತರ ಹತ್ಯೆ ಕೇಸ್ ದಾಖಲಾಗಿದೆ. ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಗೋವಾ ಪ್ರವಾಸದ ವೇಳೆ ಸಾವು ಕಂಡಿದ್ದರು. ಆರಂಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಮರಣೋತ್ತರ ಪರೀಕ್ಷೆಯ ನಂತರ ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸೋನಾಲಿ ಪೊಗಟ್ ಅವರ ಸಾವಿನ ಎರಡು ದಿನಗಳ ನಂತರ, ಗೋವಾ ಪೊಲೀಸರು ದಾಖಲಾದ ಎಫ್‌ಐಆರ್ ಗೆ ಕೊಲೆಯ ಸೆಕ್ಷನ್‌ಗಳನ್ನು ಸೇರಿಸಿದ್ದಾರೆ.
ಪೊಗಟ್ ಅವರ ಸಹೋದರ ರಿಂಕು ಢಾಕಾ ಅವರ ದೂರಿನ ಮೇರೆಗೆ ಪೊಲೀಸರು ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.