
ಮೂರು ದಿನಗಳ ಹಿಂದಷ್ಟೇ ಶಿವಸೇನಾ ನಾಯಕನನ್ನು ಪಂಜಾಬಿನ ಅಮೃತಸರದಲ್ಲಿ ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬೆನ್ನಲ್ಲೇ ಇದೀಗ ಬಿಹಾರದಲ್ಲಿ ಇಂಥವುದೇ ಘಟನೆ ನಡೆದಿದೆ.
ಬಿಹಾರದ ಕತಿಯಾರ್ ಜಿಲ್ಲೆಯಲ್ಲಿ ಸಂಜೀವ್ ಮಿಶ್ರಾ ಎಂಬ ಬಿಜೆಪಿ ಮುಖಂಡನನ್ನು ಆತನ ಮನೆ ಮುಂದೆಯೇ ಸೋಮವಾರದಂದು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಇವರು ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾಗಿದ್ದು, ಸೋಮವಾರ ತಮ್ಮ ಮನೆಯ ಮುಂದೆ ಕುಳಿತಿರುವಾಗಲೇ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಇದರ ಪರಿಣಾಮ ಸಂಜೀವ್ ಮಿಶ್ರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಘಟನೆಗೆ ಹಳೆ ವೈಷಮ್ಯ ಹಾಗೂ ಆಸ್ತಿ ವಿವಾದ ಕಾರಣವೆಂದು ಪೊಲೀಸರು ಹೇಳಿದ್ದಾರೆ.