ಕಲಬುರ್ಗಿ: ಕಲಬುರ್ಗಿ ಬಿಜೆಪಿ ಸಂಸದ ಉಮೇಶ್ ಜಾಧವ್ ಬೆಂಬಲಿಗ ಗಿರೀಶ್ ಚಕ್ರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಿಎಸ್ ಎನ್ ಎಲ್ ಸಲಹಾ ಸಮಿತಿ ನಿರ್ದೇಶಕನಾಗಿ ನಾಲ್ಕು ದಿನಗಳ ಹಿಂದೆ ಆಯ್ಕೆಯಾಗಿದ್ದ ಅವರನ್ನು ದುಷ್ಕರ್ಮಿಗಳು ಕಣ್ಣಿಗೆ ಖಾರದಪುಡಿ ಎರಚಿ ಬಳಿಕ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸಹೋದರ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಸಹೋದರ ಸದಾಶಿವ ಚಕ್ರ, ನನ್ನ ತಮ್ಮನನ್ನು ಸುಪಾರಿ ಕೊಟ್ಟು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ರಾಜಕೀಯವಾಗಿ ಆತ ಬೆಳೆಯುವುದನ್ನು ಸಹಿಸಲಾಗದೇ ಈ ಕೃತ್ಯವೆಸಗಿದ್ದಾರೆ. ಕೊಲೆ ಮಾಡಿದವರು ಯಾರು ಎಂಬುದನ್ನು ಪೊಲೀಸರ ಬಳಿ ಹೇಳುತ್ತೇನೆ ಎಂದಿದ್ದಾರೆ.
ರಾತ್ರಿ 10 ಗಂಟೆಗೆ ನನ್ನ ತಮ್ಮನನ್ನು ಸನ್ಮಾನ ಮಾಡುವುದಾಗಿ ಕರೆದುಕೊಂಡು ಹೋಗಿದ್ದರು. ಸನ್ಮಾನ ಮಾಡಿದ ಬಳಿಕ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೊಲೆಗೆ ಸುಪಾರಿ ನೀಡಿದವರ ಹೆಸರನ್ನು ಪೊಲೀಸರಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಗಿರೀಶ್ ಚಕ್ರ ಅವರನ್ನು ಸಾಗನೂರ ಗ್ರಾಮದ ಸಚಿನ್ ಹಾಗೂ ಗ್ಯಾಂಗ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.