ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಚಿವರಾದ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಟೀಂ ಔಟಾಗಲಿದ್ದು, ದೆಹಲಿಯಲ್ಲಿರುವ ಒಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಯಾರಿಗೂ ಹೇಳಬೇಡಿ, ಈಶ್ವರಪ್ಪ, ಶೆಟ್ಟರ್ ಟೀಂ ತೆಗೆಯುತ್ತೇವೆ. ಹೊಸ ತಂಡವನ್ನು ರಚಿಸುತ್ತಿದ್ದೇವೆ. ಮುಖ್ಯಮಂತ್ರಿ ಸ್ಥಾನಕ್ಕೆ ಮೂವರ ಹೆಸರಿದ್ದು, ಇಲ್ಲಿನವರಿಗೆ ಚಾನ್ಸ್ ಸಿಗಲ್ಲ. ಡೆಲ್ಲಿಯಿಂದ ಬರುತ್ತಾರೆ ಎಂದು ಕಟೀಲ್ ಅವರು ಹೇಳಿದ್ದಾರೆನ್ನಲಾದ ಆಡಿಯೋ ವೈರಲ್ ಆಗಿದೆ.
ಆಡಿಯೋ ಭಾರಿ ಸಂಚಲನವನ್ನುಂಟು ಮಾಡಿದ ಬೆನ್ನಲ್ಲೇ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದಾರೆ. ಆಡಿಯೋ ನನ್ನದಲ್ಲ, ಅದು ನಕಲಿಯಾಗಿದ್ದು, ತನಿಖೆ ಕೈಗೊಳ್ಳಬೇಕು ಎಂದು ಸಿಎಂ ಭೇಟಿಯಾಗಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.