ಬೆಂಗಳೂರು: ವಾಲ್ಮೀಕಿ ನಿಗಮ, ಮೂಡಾ ಹಗರಣದ ಬೆನ್ನಲ್ಲೇ ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಿದೆ ಎಂದು ಆರೋಪಿಸಿ ಬಿಜೆಪಿ-ಜೆಡಿಎಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಯಾವ ಇಲಾಖೆಯಲ್ಲಿ ಯಾವೆಲ್ಲ ಹುದ್ದೆಗಳಿಗೆ ಎಷ್ಟೆಷ್ಟು ರೇಟ್ ಫಿಕ್ಸ್ ಮಾಡಲಾಗಿದೆ ಎನ್ನುವ ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಸಿಎಂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದ ಎಲ್ಲೆ ಮೀರಿದೆ. ಸಿದ್ದರಾಮಯ್ಯ ಅವರದ್ದು ಪಾರದರ್ಶಕ ಭ್ರಷ್ಟ ಸರ್ಕಾರ. ಇಲಾಖೆಗಳಲ್ಲಿ ವರ್ಗಾವಣೆಗೆ ರೇಟ್ ಕರ್ಡ್ ಫಿಕ್ಸ್ ಮಾಡಿದ್ದಾರೆ. 40 ವರ್ಷದ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಇದು ಸುಳ್ಳು. ಯಾರೂ ಒಪ್ಪಲ್ಲ ಎಂದು ವಾಗ್ದಾಳಿ ನಡೆಸಿದರು.
ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ 50 ಲಕ್ಷದಿಂದ 1 ಕೋಟಿ, ಎಇ 50 ಲಕ್ಷದಿಂದ 75 ಲಕ್ಷ, ತಹಶೀಲ್ದಾರ್ 50 ಲಕ್ಷದಿಂದ 1 ಕೋಟಿ, ಬೆಂಗಳೂರು ಎಸಿ 5 ಕೋಟಿ, ಎಸಿಪಿಗೆ 1.5 ಕೋಟಿಯಿಂದ 2 ಕೋಟಿ, ಬೆಂಗಳೂರು ಎಇ 20-25 ಲಕ್ಷ ರು ಕೊಡಬೇಕು ಎಂದು ಆರೋಪಿಸಿದರು.