ಬೆಂಗಳೂರು: ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದೇ ವೇಳೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ನಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಬಿಜೆಪಿ ಜೆಡಿಎಸ್ ನ ನಾಲ್ಕನೇ ದಿನದ ಪಾದಯಾತ್ರೆ ಮದ್ದೂರಿನ ನಿಡಘಟ್ಟದಿಂದ ಆರಂಭವಾಗಿದೆ. ಪಾದಯಾತ್ರೆ ನಡೆಯುತ್ತಿದ್ದ ವೇಳೆ ಚನ್ನಪಟ್ಟಣದ ಬಳಿ ದಾವಣಗೆರೆಯ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಯುವಕ ಕಾಣೆಯಾಗಿದ್ದಾನೆ.
18 ವರ್ಷದ ಮಹೇಶ್ ಕರಿಬಸಪ್ಪ ನಾಪತ್ತೆಯಾಗಿರುವ ಯುವಕ. ಯುವಕ ಮೂಗನಾಗಿದ್ದು ಪತ್ತೆಯಾದಲ್ಲಿ ಈ ಸಂಖ್ಯೆಗೆ ಸಂಪರ್ಕಿಸಿ: 9945587762 ಎಂದು ರಾಜ್ಯ ಬಿಜೆಪಿ ಘಟಕ ಮನವಿ ಮಾಡಿದೆ.