ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಆರಂಭವಾಗಿದ್ದು, ಬಿಜೆಪಿಯಲ್ಲಿ ಆರೋಪಿತರನ್ನು, ಭ್ರಷ್ಟರನ್ನು ಸೇರಿಸಿಕೊಂಡು ಪಾದಯಾತ್ರೆ ಮಾಡುತ್ತಿರುವುದು ವರ್ತಮಾನ ಕಾಲದ ವ್ಯಂಗ್ಯ ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪ ಹೊತ್ತಿರುವ ಚೈತ್ರ ಕುಂದಾಪುರ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಪ್ರಸಾದ್ ಕುಂದಾಪುರ ಬಿಜೆಪಿ ಪಾದಯಾತ್ರೆಯಲ್ಲಿದ್ದಾನೆ. ಬಿಜೆಪಿಗೂ ಟಿಕೆಟ್ ವಂಚನೆ ಪ್ರಕರಣದ ಆರೋಪಿಗಳಿಗೂ ಸಂಬಂಧವಿಲ್ಲ ಎಂದಿದ್ದ ರಾಜ್ಯ ಬಿಜೆಪಿ, ಆ ಪ್ರಕರಣದ ಆರೋಪಿಯನ್ನು ಪಾದಯಾತ್ರೆಯಲ್ಲಿ ಸೇರಿಸಿಕೊಂಡಿದ್ದೇಕೆ? ಟಿಕೆಟ್ ಮಾರಾಟವು ಬಿಜೆಪಿ ಪ್ರಾಯೋಜಿತ ಅಕ್ರಮವೇ? ಎಂದು ಪ್ರಶ್ನಿಸಿದೆ.
ಬಿಜೆಪಿಯ ಇಂತಹ ಕಳಂಕಿತರು, ಕಳ್ಳರು ಪಾದಯಾತ್ರೆ ಮಾಡಿದರೆ ಈ ನೆಲ ಅಪವಿತ್ರವಾಗುವುದು ನಿಶ್ಚಿತ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.