ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ, ಅದರ ಮಿತ್ರ ಪಕ್ಷ ಅಸ್ಸಾಂನಿಂದ ಎರಡೂ ಸ್ಥಾನಗಳಲ್ಲಿ ಗೆದ್ದಿದೆ. ಇದರೊಂದಿಗೆ ಮೇಲ್ಮನೆಯಲ್ಲಿ ಪಕ್ಷದ ಸದಸ್ಯರ ಸಂಖ್ಯೆ 100 ಕ್ಕೆ ತಲುಪಿದೆ.
ಗುರುವಾರ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಅಸ್ಸಾಂನಿಂದ ಎರಡೂ ರಾಜ್ಯಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಇದರೊಂದಿಗೆ, ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯೆಯು 100 ರ ಗಡಿಯನ್ನು ಮುಟ್ಟಿದ್ದು, 1988 ರ ನಂತರ ಈ ಸಾಧನೆ ಮಾಡಿದ ಮೊದಲ ಪಕ್ಷವಾಗಿದೆ.
ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ತಲಾ ಒಂದು ಸ್ಥಾನವನ್ನು ಗೆದ್ದುಕೊಂಡಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಗುರುವಾರ ಘೋಷಿಸಿದ್ದಾರೆ, ಬಿಜೆಪಿ ಅಭ್ಯರ್ಥಿ ಪಬಿತ್ರಾ ಮಾರ್ಗರಿಟಾ 46 ಮತಗಳನ್ನು ಪಡೆದರೆ, ಅದರ ಮಿತ್ರ ಪಕ್ಷವಾದ ಯುಪಿಪಿಎಲ್‌ನ ಅಭ್ಯರ್ಥಿ ರುಂಗ್ವ್ರಾ ನರ್ಜಾರಿ 44 ಮತಗಳನ್ನು ಪಡೆದರು. ಕಾಂಗ್ರೆಸ್ ಅಭ್ಯರ್ಥಿ ರಿಪುನ್ ಬೋರಾ 35 ಮತಗಳನ್ನು ಪಡೆದರೆ 1 ಮತ ರದ್ದಾಯಿತು.
ಈ ಗೆಲುವಿನೊಂದಿಗೆ ಮೇಲ್ಮನೆಯಲ್ಲಿ ಬಿಜೆಪಿಯ ಸಂಖ್ಯೆ 100ರ ಗಡಿ ತಲುಪಿದ್ದು, 1988ರ ನಂತರ ಈ ಸಾಧನೆ ಮಾಡಿದ ಮೊದಲ ಪಕ್ಷವಾಗಿದೆ.