ಬೆಂಗಳೂರು : ಬಿಜೆಪಿಯವರು ಹಿಂದೂಗಳೇ ಅಲ್ಲ, ಬದಲಾಗಿ ಹಿಂದೂ ಹೆಸರಿನ ಫಲಾನುಭವಿಗಳು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾತನಾಡಿದ ಅವರು ಬಿಜೆಪಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಇತಿಹಾಸ ಗೊತ್ತಿರದ ಪ್ರಧಾನಿ ನರೇಂದ್ರ ಮೋದಿ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿರುವುದು ಇತಿಹಾಸಕ್ಕೆ ಮಾಡುವ ಅಪಚಾರ.
ಬಿಜೆಪಿಯವರನ್ನು ದೇವರೇ ಕ್ಷಮಿಸೋದಿಲ್ಲ, ಅದಕ್ಕೆ ಅಯೋಧ್ಯೆಯಲ್ಲಿಯೇ ಅವರನ್ನು ಸೋಲಿಸಿದ್ದಾರೆ ಎಂದು ಕಿಡಿಕಾರಿದರು. ಸುಳ್ಳಿನ ಭಾಷಣ ಮಾಡುವುದು ಪ್ರಧಾನಿ ಮೋದಿ ಹುದ್ದೆಗೆ ಶೋಭೆ ತರುವಂತದ್ದಲ್ಲ ಎಂದರು.
ಪ್ರಧಾನಿ ಮೋದಿ ಅವರಿಗೆ ಬುದ್ಧಿ ಭ್ರಮಣೆಯಾದಂತೆ ಕಾಣ್ತಿದೆ ಎಂದರು.