ಬೆಂಗಳೂರು : ಬಿಜೆಪಿಯವರು ಹತಾಶೆಯಿಂದ ರಾಜ್ಯ ಸರ್ಕಾರದ ಮೇಎಲ 15% ಕಮಿಷನ್ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಬಿಜೆಪಿಯವರು ವಿಪಕ್ಷ ನಾಯಕನನ್ನು ನೇಮಕ ಮಾಡಿಕೊಳ್ಳಲಿ. ಅದು ಬಿಟ್ಟು ಸುಮ್ಮನೆ ಕಮಿಷನ್ ಬಗ್ಗೆ ಆರೋಪ ಮಾಡುವುದು ಬೇಡ ಬಿಜೆಪಿಯವರು ಹತಾಶೆಯಿಂದ ಆರೋಪ ಮಾಡುತ್ತಿದ್ದಾರೆ. ಎಲ್ಲಿ ಹೋಗಿ ಧ್ವನಿ ಏರಿಸಬೇಕು ಅಲ್ಲಿ ಇವರು ಮಾತನಾಡುತ್ತಿಲ್ಲ. ಕೇಂದ್ರದ ನಾಯಕರ ಬಳಿ ಹೋಗಿ ವಿರೋಧ ಪಕ್ಷದ ನಾಯಕನನ್ನು ಕೊಡಿ ಎಂದು ಜೋರಾಗಿ ಮಾತನಾಡಲಿ ಎಂದು ಹೇಳಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವಾಗ ಫಲಾನುಭವಿಗಳ ಜಾತಿಯನ್ನು ಕೂಡಾ ಕೇಳುತ್ತೇವೆ ಎಂದರು.