ಬೆಂಗಳೂರು : ಬಿಜೆಪಿ ಪಕ್ಷದಿಂದ ಶಾಸಕ ಯತ್ನಾಳ್ ರನ್ನು 6 ವರ್ಷ ಉಚ್ಚಾಟನೆ ಮಾಡಲಾಗಿದ್ದು, ಕಾಂಗ್ರೆಸ್ ಟ್ವೀಟ್ ಮೂಲಕ ಕುಹಕವಾಡಿದೆ.
ಭ್ರಷ್ಟ ಅಪ್ಪ-ಮಕ್ಕಳ ಸೂಟ್ ಕೇಸ್ ರಾಜಕೀಯಕ್ಕೆ ಬಗ್ಗಿದ ಬಿಜೆಪಿ ಹೈಕಮಾಂಡ್ ಎಂದು ಶಾಸಕ ಯತ್ನಾಳ್ ಉಚ್ಚಾಟನೆಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.
ನಾಗಪುರದ ಬಿಜೆಪಿಯನ್ನು ಸೋಲಿಸಿದ ಕರ್ನಾಟಕ ಬಿಜೆಪಿ! ಇಂದು ಇಲಿಯಾದ ಯತ್ನಾಳ್! ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ . ಈಗ ‘ಸಂತೋಷ’ ವಾಯಿತೇ? ಆ ಜೀ ಈ ಜೀ ಗಳ ಮಾತುಕೇಳಿ ರಾಜಕೀಯ ಜೀವನ ಹಾಳು ಮಾಡಿಕೊಂಡ ಯತ್ನಾಳ್ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈಗ ‘ಸಂತೋಷ’ ವಾಯಿತೇ?
ಆ ಜೀ ಈ ಜೀ ಗಳ ಮಾತುಕೇಳಿ ರಾಜಕೀಯ ಜೀವನ ಹಾಳು ಮಾಡಿಕೊಂಡ ಯತ್ನಾಳ್! pic.twitter.com/io9QllyIEV— Karnataka Congress (@INCKarnataka) March 26, 2025