ಬಿಜೆಪಿ ಸರ್ಕಾರವು ರೈತ ವಿರೋಧಿ ಕೃಷಿ ಕಾನೂನನ್ನ ಶೀಘ್ರದಲ್ಲೇ ಹಿಂಪಡೆದುಕೊಳ್ಳಬೇಕು ಅಂತಾ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಕೃಷಿ ಕಾನೂನನ್ನ ಹಿಂತೆಗೆದುಕೊಳ್ಳಬೇಕು ಇಲ್ಲವೇ ಸ್ಥಾನದಿಂದ ಕೆಳಗಿಳಿಯಬೇಕು ಅಂತಾ ಮಿಡ್ನಾಪೋರ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ.
ಬಿಜೆಪಿ ಪಶ್ಚಿಮ ಬಂಗಾಳದ ಮೇಲೆ ಹಿಡಿತ ಸಾಧಿಸಲು ನಾನೆಂದಿಗೂ ಅವಕಾಶ ನೀಡಲಾರೆ. ಅಂತಹ ಯಾವುದೇ ಪ್ರಯತ್ನಕ್ಕೆ ರಾಜ್ಯದ ಜನತೆಯೂ ಬಿಜೆಪಿಗೆ ಸಾಥ್ ನೀಡಬಾರದು ಅಂತಾ ಪಶ್ಚಿಮ ಬಂಗಾಳದ ಜನತೆಯಲ್ಲಿ ದೀದಿ ಮನವಿ ಮಾಡಿದ್ದಾರೆ.
ಮುಂಬರುವ ಚುನಾವಣೆ ಫಲಿತಾಂಶದ ಬಳಿಕವೂ ನಾನು ಸಿಎಂ ಆಗಿ ಮುಂದುವರಿದ್ರೆ ಸರ್ಕಾರ ಜನಕ್ಕೆ ಉಚಿತ ಪಡಿತರ ನೀಡಲಿದೆ. 294 ಸದಸ್ಯರುಳ್ಳ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮುಂದಿನ ವರ್ಷ ಏಪ್ರಿಲ್ – ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ.