ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶ್ರೀಮಂತ ಮತ್ತು ಬಡವರಿಗಾಗಿ ಎರಡು ಪ್ರತ್ಯೇಕ ಭಾರತವನ್ನು ನಿರ್ಮಾಣ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದೇಶದ ಸಂಪದ್ಭರಿತ ಸಂಪನ್ಮೂಲವನ್ನು ಕೆಲವೇ ಕೆಲವು ಶ್ರೀಮಂತ ಜನರ ಕೈಗಿಡುತ್ತಿದ್ದಾರೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಪಡೆಯಬೇಕಾದ ಏಕೈಕ ರಾಜ್ಯವೆಂದರೆ ಗುಜರಾತ್. ಇಲ್ಲಿ ಪ್ರತಿಭಟನೆ ನಡೆಸಿದ ಜಿಗ್ನೇಶ್ ಮೆವಾನಿ ಅವರನ್ನು ಮೂರು ತಿಂಗಳ ಕಾಲ ಜೈಲಿನಲ್ಲಿಡಲಾಗಿದೆ. ನಾನು ಹೇಳುತ್ತಿದ್ದೇನೆ, ಮೆವಾನಿ ಅವರನ್ನು 10 ವರ್ಷಗಳ ಕಾಲ ಜೈಲಿನಲ್ಲಿಟ್ಟರೂ ಅವರಿಗೆ ಏನೂ ಆಗುವುದಿಲ್ಲ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಸಚಿವರ ಮನೆಯಲ್ಲೇ ಶಾಕಿಂಗ್ ಘಟನೆ: ನೇಣು ಬಿಗಿದ ಸ್ಥಿತಿಯಲ್ಲಿ ಸೊಸೆ ಶವ ಪತ್ತೆ
5 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ನ ಮ್ಯಾಜಿಸ್ಟ್ರೇಟ್ ಕೋರ್ಟ್ ಜಿಗ್ನೇಶ್ ಮೆವಾನಿ ಸೇರಿದಂತೆ 9 ಜನರಿಗೆ ಮೇ 5 ರಂದು ಮೂರು ತಿಂಗಳ ಜೈಲುಶಿಕ್ಷೆ ವಿಧಿಸಿತ್ತು.
ಪ್ರಧಾನಮಂತ್ರಿಯಾಗುವ ಮುನ್ನ ಮೋದಿ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದರು. ಅಂದು ಗುಜರಾತ್ ನಲ್ಲಿ ಆರಂಭಿಸಿದ್ದ ಕೆಲಸವನ್ನೇ ಈಗ ಮುಂದುವರಿಸಿದ್ದಾರೆ. ಅದುವೇ ಗುಜರಾತ್ ಮಾದರಿಯಾಗಿದೆ ಎಂದು ಟೀಕಿಸಿರುವ ರಾಹುಲ್ ಗಾಂಧಿ, ಈಗ ಶ್ರೀಮಂತ ಮತ್ತು ಬಡವರಿಗೆ ಎಂಬ ಪ್ರತ್ಯೇಕ ಭಾರತವಾದಂತಾಗಿದೆ. ಇಂತಹ ಮಾದರಿಯನ್ನು ಕಾಂಗ್ರೆಸ್ ಬಯಸುವುದಿಲ್ಲ ಎಂದಿದ್ದಾರೆ.