ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ವಿವಿಧ ಹಂತಗಳಿಗೆ ಬಿಜೆಪಿ ತನ್ನ 91 ಅಭ್ಯರ್ಥಿಗಳ ಏಳನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. 20 ಸ್ಥಾನಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೊಡಲು ಕೇಸರಿ ಪಕ್ಷ ನಿರಾಕರಿಸಿದೆ, ಈ ಕ್ಷೇತ್ರಗಳ ಪೈಕಿ ಹೆಚ್ಚಿನವು ರಾಜ್ಯದ ಉತ್ತರ ಭಾಗದಲ್ಲಿವೆ.
ಪ್ರತಿಷ್ಠಿತ ಕ್ಷೇತ್ರ ಅಯೋಧ್ಯೆಯಲ್ಲಿ ಆಡಳಿತ ಪಕ್ಷವು ತನ್ನ ಹಾಲಿ ಶಾಸಕ ವೇದ್ ಪ್ರಕಾಶ್ ಗುಪ್ತಾ ಅವರನ್ನು ಕಣಕ್ಕಿಳಿಸಿದೆ. ಈ ಹಿಂದೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಯೋಧ್ಯೆಯಿಂದ ನಾಮನಿರ್ದೇಶನ ಮಾಡಬಹುದೆಂಬ ಊಹಾಪೋಹವಿತ್ತು, ಆದರೆ ಪಕ್ಷವು ಯೋಗಿರನ್ನು ಅವರ ತವರು ಕ್ಷೇತ್ರವಾದ ಗೋರಖ್‌ಪುರ ನಗರದಿಂದ ಕಣಕ್ಕಿಳಿಸಿದೆ.
ತಂದೆಯ ಅಂತಿಮ ದರ್ಶನ ಪಡೆಯದ ಸಿಎಂ: ಅಂತ್ಯಸಂಸ್ಕಾರಕ್ಕೂ ಗೈರು
ಆದಿತ್ಯನಾಥ್ ಪ್ರಭಾವವಿರುವ ಪೂರ್ವ ಉ.ಪ್ರ.ದ ಗೋರಖ್‌ಪುರ, ಖುಶಿನಗರ, ಡಿಯೋರಿಯಾ ಮತ್ತು ಸಂತ ಕಬೀರ್ ನಗರ ಜಿಲ್ಲೆಗಳಲ್ಲಿ ಬಿಜೆಪಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಗೋರಖ್‌ಪುರ ಜಿಲ್ಲೆಯಲ್ಲಿ ಸಹಜನ್ವಾ ಕ್ಷೇತ್ರದಲ್ಲಿ ಸಿಎಂ ಆಪ್ತ ಹಾಗೂ ಹಾಲಿ ಶಾಸಕ ಶೀತಲ್ ಪಾಂಡೆ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿದ್ದು, ಅವರ ಬದಲಿಗೆ ಪ್ರದೀಪ್ ಶುಕ್ಲಾ ಅವರನ್ನು ಕಣಕ್ಕಿಳಿಸಿದೆ.
2017 ರ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ಮೂರನೇ ಸ್ಥಾನ ಪಡೆದಿದ್ದ ನಿರ್ಮಲ್ ವರ್ಮಾ ಅವರನ್ನು ಬಿಸ್ವಾನ್‌ನ ಹಾಲಿ ಶಾಸಕ ಮಹೇಂದ್ರ ಸಿಂಗ್ ಅವರ ಬದಲಿಗೆ ಬಿಜೆಪಿ ಕಣಕ್ಕಿಳಿಸಿದೆ.
ಕೆಲ ದಿನಗಳ ಹಿಂದೆ ವರ್ಮಾ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಭೋಗ್ನಿಪುರದಲ್ಲಿ, ಪಕ್ಷವು ಗುರುವಾರ ತನ್ನ ಮಡಿಲಿಗೆ ಪಕ್ಷಾಂತರಗೊಂಡ ಹಾಲಿ ಶಾಸಕ ವಿನೋದ್ ಕುಮಾರ್ ಕಟಿಯಾರ್ ಬದಲಿಗೆ ಪಕ್ಷಕ್ಕೆ ಬಂದಿರುವ ಕಾಂಗ್ರೆಸ್‌ನ ಮಾಜಿ ನಾಯಕ ರಾಕೇಶ್ ಸಚಿನ್ ಅವರನ್ನು ಇಳಿಸಿದೆ. ಈ ತಿಂಗಳ ಆರಂಭದಲ್ಲಿ ಹಾಲಿ ಶಾಸಕ ಬ್ರಿಜೇಶ್ ಕುಮಾರ್ ಪ್ರಜಾಪತಿ ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ಪಕ್ಷಾಂತರವಾಗಿದ್ದು, ತಿಂದವಾರಿಯಲ್ಲಿ ಬಿಜೆಪಿ ರಾಮಕೇಶ್ ನಿಶಾದ್ ಅವರನ್ನು ಕಣಕ್ಕಿಳಿಸಿದೆ.