ಬೆಂಗಳೂರು: ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಮಾನಸಿಕ ಅಸ್ವಸ್ಥ ಎಂಬ ಸರ್ಕಾರದ ಹೇಳಿಕೆಗೆ ವಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಹಸುಗಳ ಕೆಚ್ಚಲು ಕೊಯ್ದ ಮತಾಂಧ ಸೈಯ್ಯದ್ ನಸ್ರುನಿಗೆ ಮಾನಸಿಕ ಅಸ್ವಸ್ಥ ಪಟ್ಟ ಕಟ್ಟಿದ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ತನಿಖೆ ಮಾಡದೆ ಮುಚ್ಚಿ ಹಾಕಲು ಯತ್ನಿಸಿದೆ ಎಂದು ಕಿಡಿಕಾರಿದೆ.
ಹಸುಗಳ ಕೆಚ್ಚಲಿಗೆ ಬ್ಲೇಡ್ ಹಾಕಲು ಸುಪಾರಿ ಕೊಟ್ಟವರು ಯಾರು ಎಂದು ಹೇಳಬೇಕಾದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹಸುಗಳನ್ನು ನೀಡಿ ಕರ್ಣನ ಕುಟುಂಬಸ್ಥರ ಕಣ್ಣಿಗೆ ಬೆಣ್ಣೆ ಹಚ್ಚಲು ಯತ್ನಿಸಿದ್ದಾರೆ. ಆದರೆ, ಹಸು ಮಾಲೀಕ ಕರ್ಣ ಜಮೀರ್ ಅವರು ನೀಡಿದ ಹಸುಗಳನ್ನು ತಿರಸ್ಕರಿಸಿದ್ದಾರೆ.
ಕಳೆದ 10 ವರ್ಷಗಳಿಂದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮತಾಂಧ ಸೈಯ್ಯದ್ ನಸ್ರು ಮಾನಸಿಕ ಅಸ್ವಸ್ಥನಾಗಿರಲು ಹೇಗೆ ಸಾಧ್ಯ? ಆಕಸ್ಮಿಕ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಮೊದಲು ಮಾನಸಿಕ ಅಸ್ವಸ್ಥತೆಯಿಂದ ಹೊರ ಬಂದರೆ, ರಾಜ್ಯದಲ್ಲಿ ನಡೆದ ಎಲ್ಲಾ ಪ್ರಕರಣಗಳಿಗೆ ನ್ಯಾಯ ಸಿಗಲಿದೆ ಎಂದು ವಾಗ್ದಾಳಿ ನಡೆಸಿದೆ.