alex Certify ಒಡಿಶಾದಲ್ಲಿ ಹೆಚ್ಚಾಯ್ತು ರಾಜಕೀಯ ಪಕ್ಷಗಳ ನಡುವಿನ ‘ಮೊಟ್ಟೆ’ ಗಲಾಟೆ..! ಬಿಜೆಡಿ ಬೆನ್ನಲ್ಲೇ ಬಿಜೆಪಿ ಸಂಸದೆ ಮೇಲೂ ಮೊಟ್ಟೆ ತೂರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಿಶಾದಲ್ಲಿ ಹೆಚ್ಚಾಯ್ತು ರಾಜಕೀಯ ಪಕ್ಷಗಳ ನಡುವಿನ ‘ಮೊಟ್ಟೆ’ ಗಲಾಟೆ..! ಬಿಜೆಡಿ ಬೆನ್ನಲ್ಲೇ ಬಿಜೆಪಿ ಸಂಸದೆ ಮೇಲೂ ಮೊಟ್ಟೆ ತೂರಾಟ

ಓಡಿಶಾದಲ್ಲಿ ರಾಜಕೀಯ ಪಕ್ಷಗಳ ನಡುವೆ ಮೊಟ್ಟೆ ದಾಳಿಯು ಭಾರೀ ಸದ್ದು ಮಾಡುತ್ತಿದೆ. ಆಡಳಿತಾರೂಡ ಬಿಜೆಡಿ ಹಾಗೂ ಬಿಜೆಪಿ ನಡುವಿನ ಮೊಟ್ಟೆ ದಾಳಿಯ ಬೆನ್ನಲ್ಲೇ ಇದೀಗ ಕಾಂಗ್ರೆಸ್​ ಬೆಂಬಲಿಗರೂ ಸಹ ಈ ಮೊಟ್ಟೆ ದಾಳಿಯಲ್ಲಿ ಕೈ ಜೋಡಿಸಿದ್ದಾರೆ.

ಪುರಿಯಲ್ಲಿ ಓಡಿಶಾ ಸಿಎಂ ನವೀನ್ ಪಟ್ನಾಯಕ್​ ಬೆಂಗಾವಲು ವಾಹನದ ಮೇಲೆ ಬಿಜೆಪಿ ಬೆಂಬಲಿಗರು ಮೊಟ್ಟೆ ಎಸೆದ ಬೆನ್ನಲ್ಲೇ ಇದೇ ದಾರಿಯನ್ನು ತುಳಿದ ಕಾಂಗ್ರೆಸ್​ ಕಾರ್ಯಕರ್ತರು ಭುವನೇಶ್ವರದಲ್ಲಿ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರನ್ನು ಗುರಿಯಾಗಿಸಿ ಮೊಟ್ಟೆ ದಾಳಿ ನಡೆಸಿದ್ದಾರೆ.

ಭಾನುವಾರ ಮುಂಜಾನೆ ಓಡಿಶಾದಲ್ಲಿ ಆಡಳಿತಾರೂಢ ಬಿಜೆಡಿ ವಿದ್ಯಾರ್ಥಿ ಘಟಕವಾದ ಬಿಜು ವಿದ್ಯಾರ್ಥಿ ಜನತಾ ದಳದ ಕಾರ್ಯಕರ್ತರು ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರಪಾಡಾದಲ್ಲಿ ಕೇಂದ್ರ ಸಚಿವ ಬಿಶ್ವೇಶ್ವರ ತುಡು ಬೆಂಗಾವಲು ವಾಹನದ ಮೇಲೆ ಮೊಟ್ಟೆಗಳನ್ನು ಎಸೆದಿದ್ದರು.

ನಿರುದ್ಯೋಗ ಹಾಗೂ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್​ ಕಾರ್ಯಕರ್ತರು ಬನಮಾಲಿಪುರದಲ್ಲಿ ಅಪರಾಜಿತಾ ಸಾರಂಗಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಹಾಗೂ ಅವರ ಬೆಂಗಾವಲು ವಾಹನದ ಮೇಲೆ ಮೊಟ್ಟೆಗಳನ್ನು ಎಸೆದಿದ್ದಾರೆ.

ಭುವನೇಶ್ವರ ಸಂಸದೆ ನೀಡಿದ ದೂರು ಆಧರಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೇವಲ ಮೊಟ್ಟೆ ದಾಳಿ ಮಾತ್ರವಲ್ಲದೇ ವಾಹನದ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ. ಅಲ್ಲದೇ ಕಾಂಗ್ರೆಸ್​ ಬೆಂಬಲಿಗರು ಎಂದು ಹೇಳಿಕೊಂಡಿರುವ ಪ್ರತಿಭಟನಾಕಾರರು ಚಾಕು ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನು ತಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ನಡುವೆ ಬಾಲಸೋರ್​ನಲ್ಲಿ ಹೊಸ ರೈಲು ನಿಲ್ದಾಣದ ಕಟ್ಟಡಕ್ಕೆ ಶಂಕು ಸ್ಥಾಪನೆ ಸಮಾರಂಭದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಬಿಜೆಪಿ ಬೆಂಬಲಿಗರು ತೀವ್ರ ಮಾತಿನ ಚಕಮಕಿ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ ಪರವಾಗಿ ಘೋಷಣೆ ಕೂಗಿದರೆ ಬಿಜೆಡಿ ಕಾರ್ಯಕರ್ತರು ಸಿಎಂ ಪಟ್ನಾಯಕ್​ ಘೋಷಣೆ ಕೂಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...