
ಬೆಂಗಳೂರು: 10 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಪೂರೈಸಲಿದೆ ಎಂದು ಎದೆ ಬಡಿದುಕೊಂಡಂತೆ 10 ಕೆಜಿಯ ಸಂಪೂರ್ಣ ಹಣವನ್ನು ಜನರ ಖಾತೆಗಳಿಗೆ ವರ್ಗಾಯಿಸಿ ಎಂದು ಬಿಜೆಪಿ ಒತ್ತಾಯಿಸಿದೆ.
ಕೊನೆಗೂ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು. ನಿಮ್ಮ ಸರ್ಕಾರಕ್ಕೆ ಮರ್ಯಾದೆ, ವಚನ ಬದ್ಧತೆ ಇರುವುದೇ ಆದರೆ ನೀವು ಕೊಡಬೇಕಿರುವುದು ಕೇವಲ 5 ಕೆಜಿ ಅಕ್ಕಿ ಹಣವನ್ನಲ್ಲ, ಎದೆ ಬಡೆದುಕೊಂಡಂತೆ 10 ಕೆಜಿ ಸಂಪೂರ್ಣ ಹಣವನ್ನು ಜನರ ಖಾತೆಗಳಿಗೆ ವರ್ಗಾಯಿಸಿ ಎಂದು ಒತ್ತಾಯಿಸಲಾಗಿದೆ.