ನವದೆಹಲಿ: ಗುಜರಾತ್ ನಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣಾ ಉತ್ತರ ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಟಿವಿ9 ಭಾರತ್ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಗುಜರಾತ್ ನ 182 ಸ್ಥಾನಗಳಲ್ಲಿ ಬಿಜೆಪಿ 125 ರಿಂದ 130 ಸ್ಥಾನಗಳಲ್ಲಿ ಜಯಗಳಿಸಲಿದೆ. ಕಾಂಗ್ರೆಸ್ 40 ರಿಂದ 50, ಆಮ್ ಆದ್ಮಿ ಪಕ್ಷ 3 ರಿಂದ 5 ಹಾಗೂ ಇತರರು ಮೂರರಿಂದ ಏಳು ಸ್ಥಾನ ಗಳಿಸಲಿದ್ದಾರೆ.
ಟಿವಿ9 ಭಾರತ್ ವರ್ಷ ಸಮೀಕ್ಷೆ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಅತಂತ್ರ ಫಲಿತಾಂಶ ಸೃಷ್ಟಿಯಾಗಬಹುದು. 68 ಕ್ಷೇತ್ರಗಳ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 34 ರಿಂದ 39, ಕಾಂಗ್ರೆಸ್ 28ರಿಂದ 33, ಆಮ್ ಆದ್ಮಿ ಪಕ್ಷ ಒಂದು, ಇತರರು 4 ಸ್ಥಾನ ಗಳಿಸುವ ಸಾಧ್ಯತೆ ಇದೆ.
ರಿಪಬ್ಲಿಕ್ ಸಮೀಕ್ಷೆ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿಗೆ 34 ರಿಂದ 39, ಕಾಂಗ್ರೆಸ್ 28 ರಿಂದ 33, ಆಮ್ ಆದ್ಮಿ ಪಕ್ಷ ಒಂದು ಸ್ಥಾನ ಹಾಗೂ ಇತರರು ಒಂದರಿಂದ ನಾಲ್ಕು ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ರಿಪಬ್ಲಿಕ್ ಸಮೀಕ್ಷೆಯ ಪ್ರಕಾರ ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಬಹುಮತ ಗಳಿಸಲಿದೆ. ಒಟ್ಟು 68 ಸ್ಥಾನಗಳಿರುವ ಹಿಮಾಚಲ ಪ್ರದೇಶದಲ್ಲಿ ಬಹುಮತಕ್ಕೆ 35 ಸ್ಥಾನಗಳು ಬೇಕಿದೆ.
ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ ಗುಜರಾತ್ ನ 182 ಕ್ಷೇತ್ರಗಳಲ್ಲಿ ಬಿಜೆಪಿ 117 ರಿಂದ 140, ಕಾಂಗ್ರೆಸ್ 34 ರಿಂದ 51, ಆಪ್ 6 ರಿಂದ 13, ಇತರರರು 1 ರಿಂದ 2 ಸ್ಥಾನ ಗಳಿಸಬಹುದು.
ರಿಪಬ್ಲಿಕ್ ಸಮೀಕ್ಷೆಯ ಪ್ರಕಾರ ಬಿಜೆಪಿ 128 ರಿಂದ 148, ಕಾಂಗ್ರೆಸ್ 30 ರಿಂದ 42, ಆಪ್ 2 ರಿಂದ 10, ಇತರರು 3 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.