ಬೆಂಗಳೂರು : 10 ಬಿಜೆಪಿ ಸದಸ್ಯರ ಅಮಾನತು ವಿರೋಧಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರು ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ಹೋಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ವಿಧಾನಸಭೆಯಲ್ಲಿ ಅಗೌರವ ತೋರಿದ 10 ಮಂದಿ ಬಿಜೆಪಿ ಶಾಸಕರಿಗೆ ವಿಧಾನಸಭೆ ಪ್ರವೇಶ ನಿರ್ಬಂಧಿಸಲಾಗಿದೆ. ವಿಧಾನಸಭೆಯಲ್ಲಿ ಅಸಭ್ಯ ವರ್ತನೆ, ಅಗೌರವ ತೋರಿದ 10 ಮಂದಿ ಬಿಜೆಪಿ ಶಾಸಕರನ್ನು ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿತ್ತು. ಈ ಹಿನ್ನೆಲೆ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಬರಲು ಹೇಳಿ ನಂತರ ಒಟ್ಟಾಗಿ ಹೋಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಅಚ್ಚರಿ ವಿಷಯ ಅಂದರೆ ಬಿಜೆಪಿಯ ಲೆಟರ್ ಹೆಡ್ ನಲ್ಲಿ ನೀಡಲಾಗಿರುವ ದೂರಿನಲ್ಲಿ ಮೊದಲ ಹೆಸರು ಕುಮಾರಸ್ವಾಮಿ ಅವರದ್ದೇ ಆಗಿದೆ. ಈ ಹಿನ್ನೆಲೆ ಹೆಚ್ ಡಿ ಕುಮಾರಸ್ವಾಮಿ ನಡೆ ಬಗ್ಗೆ ಬಹಳ ಚರ್ಚೆಗಳಾಗುತ್ತಿದೆ.
ಬಿಜೆಪಿ ದೂರು ನೀಡುವ ಮುನ್ನವೇ ಸ್ಪೀಕರ್ ಯುಟಿ ಖಾದರ್ ಅಲರ್ಟ್
ಬಿಜೆಪಿ ದೂರು ನೀಡುವ ಮುನ್ನವೇ ಸ್ಪೀಕರ್ ಯುಟಿ ಖಾದರ್ ಅಲರ್ಟ್ ಆಗಿದ್ದು, ರಾಜ್ಯಪಾಲರಿಗೆ 10 ಬಿಜೆಪಿ ಸದಸ್ಯರ ಅಮಾನತು ವರದಿ ಸಲ್ಲಿಕೆ ಮಾಡಿದ್ದಾರೆ. ಡಾ.ಸಿಎನ್ ಅಶ್ವತ್ಥನಾರಾಯಣ್, ಆರ್ ಅಶೋಕ್, ವೇದವ್ಯಾಸ ಕಾಮತ್, ಅರವಿಂದ್ ಬೆಲ್ಲದ್, ಅರಗ ಜ್ಞಾನೇಂದ್ರ , ವಿ.ಸುನೀಲ್ ಕುಮಾರ್, , ವೈ ಭರತ್ ಶೆಟ್ಟಿ , ಯಶಪಾಲ್ ಸುವರ್ಣ, ಮುನಿರಾಜ್, ಉಮರ್ ನಾಥ್ ಕೋಟ್ಯನ್ ಅವರನ್ನು ಸದನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದೆ. ಸ್ಪೀಕರ್ ಯುಟಿ ಖಾದರ್ ರಾಜ್ಯಪಾಲರಿಗೆ 10 ಬಿಜೆಪಿ ಸದಸ್ಯರ ಅಮಾನತು ವರದಿ ಸಲ್ಲಿಕೆ ಮಾಡಿದ್ದಾರೆ.