
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದ್ದ ಬಿಜೆಪಿ ಬುಧವಾರ ತಡರಾತ್ರಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದುವರೆಗೆ 212 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಒಟ್ಟು 18 ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಎರಡನೇ ಪಟ್ಟಿಯಲ್ಲಿ ಹಾವೇರಿಯ ನೆಹರು ಓಲೆಕಾರ್, ಮೂಡಿಗೆರೆಯ ಎಂ.ಪಿ. ಕುಮಾರಸ್ವಾಮಿ, ಚನ್ನಗಿರಿಯ ಮಾಡಾಳು ವಿರೂಪಾಕ್ಷಪ್ಪ, ಬೈಂದೂರಿನ ಬಿ,ಎಂ, ಸುಕುಮಾರ ಶೆಟ್ಟಿ, ದಾವಣಗೆರೆ ಉತ್ತರದ ಶಾಸಕ ನಿವೃತ್ತಿ ಘೋಷಿಸಿದ್ದ ರವೀಂದ್ರನಾಥ ಅವರಿಗೆ ಟಿಕೆಟ್ ಕೈತಪ್ಪಿದೆ. ಮಾಯಕೊಂಡದ ಪ್ರೊ. ಲಿಂಗಣ್ಣ, ಕಲಘಟಗಿಯ ಸಿ.ಎಂ. ನಿಂಬಣ್ಣನವರ್ ಅವರಿಗೆ ಟಿಕೆಟ್ ಕೈತಪ್ಪಿದೆ.
ಚನ್ನಗಿರಿ ಕ್ಷೇತ್ರದಿಂದ ಮಾಡಾಳ್ ವಿರೂಪಾಕ್ಷಪ್ಪ ಬದಲಿಗೆ ಶಿವಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಕೆಜಿಎಫ್ ಕ್ಷೇತ್ರದಿಂದ ಅಶ್ವಿನಿ ಸಂಪಂಗಿ ಅವರಿಗೆ ಟಿಕೆಟ್ ದೊರೆತಿದೆ.
