ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು `ನಿರ್ಲಜ್ಜ ದೆಹಲಿ ಮುಖ್ಯಮಂತ್ರಿ’ ಎಂದು ಬಿಜೆಪಿ ದೂಷಿಸಿದೆ. ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಆಯೋಜಿಸಿದ್ದರು.
ವರ್ಚುವಲ್ ಆಗಿ ನಡೆದ ಈ ಸಭೆಯಲ್ಲಿ ಕೇಜ್ರಿವಾಲ್ ಕುರ್ಚಿಯಲ್ಲಿ ಕುಳಿತು ಎರಡೂ ಕೈಗಳನ್ನು ಹಿಂದಕ್ಕೆ ಹಾಕಿ ಆರಾಮ ಭಂಗಿಯಲ್ಲಿ ಕುಳಿತು ಮೋದಿಯವರ ಭಾಷಣವನ್ನು ಆಲಿಸಿದ್ದರು. ಕೇಜ್ರಿವಾಲ್ ಅವರ ಈ ಭಂಗಿ ಬಿಜೆಪಿಗರನ್ನು ಕೆರಳಿಸಿದೆ. ಒಬ್ಬ ಪ್ರಧಾನಮಂತ್ರಿ ನಡೆಸಿದ ಸಭೆಯಲ್ಲಿ ಕುಳಿತುಕೊಳ್ಳುವ ಪರಿ ಇದೇನಾ ? ಇದು ಸಭಾ ಗೌರವವೇ ? ಎಂದು ಬಿಜೆಪಿ ಪ್ರಶ್ನಿಸಿದೆ.
ಬಿಸಿಲಿನಿಂದ ಬಸವಳಿದಿದ್ದ ವೃದ್ದೆಯನ್ನು ಹೆಗಲ ಮೇಲೆ ಹೊತ್ತೊಯ್ದ ಮಹಿಳಾ ಪೇದೆ…!
ಇದೊಂದು ನಿರ್ಲಜ್ಜವಾದ ಭಂಗಿಯಾಗಿದೆ. ಒಂದು ಅತ್ಯಂತ ಪ್ರಮುಖವಾದ ಸಭೆಯಲ್ಲಿ ಒಬ್ಬ ಮುಖ್ಯಮಂತ್ರಿ ಈ ರೀತಿ ಕುಳಿತುಕೊಳ್ಳುವುದು ಸರಿಯೇ ? ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ, “ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಅಸಭ್ಯ ವರ್ತನೆಯಿಂದ ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ’’ ಎಂದು ಟೀಕಿಸಿದ್ದಾರೆ.