ನವದೆಹಲಿ: ಕಾಂಗ್ರೆಸ್ ಮುಖ್ಯಸ್ಥರ ಚುನಾವಣಾ ಪ್ರಣಾಳಿಕೆಯಲ್ಲಿ ಅಭ್ಯರ್ಥಿ ಶಶಿ ತರೂರ್ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿದ್ದಾರೆ ಎಂದು ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಶಶಿ ತರೂರ್ ನಾಮಪತ್ರ ಸಲ್ಲಿಸಿದ ದಿನವೇ ಅವರ ಚುನಾವಣಾ ಪ್ರಣಾಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಂತಿದೆ. ಶಶಿ ತರೂರ್ ಅವರ ಚುನಾವಣಾ ಪ್ರಣಾಳಿಕೆಯು ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿದ್ದಾರೆ ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿತು
ಶಶಿ ತರೂರ್ ಅವರ ಪ್ರಣಾಳಿಕೆಯಲ್ಲಿ ಭಾರತದ ತಪ್ಪು ನಕ್ಷೆಯನ್ನು ತೋರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಕೆಲವು ಭಾಗಗಳನ್ನು ಬಿಡಲಾಗಿದೆ. ಭಾರತದ ತಪ್ಪು ನಕ್ಷೆಯು ಕೋಲಾಹಲಕ್ಕೆ ಕಾರಣವಾದ ನಂತರ ಶಶಿ ತರೂರ್ ಅವರ ಕಚೇರಿ ನಂತರ ಪ್ರಣಾಳಿಕೆಗೆ ತಿದ್ದುಪಡಿಗಳನ್ನು ಮಾಡಿದೆ.