ಅಹಮದಾಬಾದ್: ಪಂಜಾಬ್ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಲವಲವಿಕೆಯಿಂದಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ಗುಜರಾತ್‌ನತ್ತ ತನ್ನ ಗಮನವನ್ನು ಹರಿಸಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ, ಕೇಜ್ರಿವಾಲ್ ಇಂದು ಅಹಮದಾಬಾದ್ ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಎಎಪಿ ತಿರಂಗ ಯಾತ್ರೆ ಎಂದು ಹೆಸರಿನ ರೋಡ್ ಶೋನಲ್ಲಿ ಭಾಗವಹಿಸಿದ್ದರು.
ರೋಡ್ ಶೋ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಗುಜರಾತ್‌ನಲ್ಲಿ ಬಿಜೆಪಿ 25 ವರ್ಷಗಳಿಂದ ಅಧಿಕಾರದಲ್ಲಿದೆ. ಆದರೆ, ಭ್ರಷ್ಟಾಚಾರ ಕೊನೆಗೊಳಿಸಲು ಸಾಧ್ಯವಾಗಲಿಲ್ಲ. ನಾನು ಯಾವುದೇ ಪಕ್ಷವನ್ನು ಟೀಕಿಸಲು ಬಂದಿಲ್ಲ, ಬಿಜೆಪಿಯನ್ನು ಸೋಲಿಸಲು ಬಂದಿಲ್ಲ, ಕಾಂಗ್ರೆಸ್ ಸೋಲಿಸಲು ಬಂದಿಲ್ಲ, ಗುಜರಾತ್ ಗೆಲ್ಲಿಸಲು ಬಂದಿದ್ದೇನೆ, ಗುಜರಾತ್ ಮತ್ತು ಗುಜರಾತಿಗಳನ್ನು ಗೆಲ್ಲಿಸಬೇಕು, ಗುಜರಾತ್ ನಲ್ಲಿ ಭ್ರಷ್ಟಾಚಾರ ಕೊನೆಗಾಣಬೇಕು ಎಂದು ಅವರು ಹೇಳಿದರು.
25 ವರ್ಷಗಳ ನಂತರ ಈಗ ಬಿಜೆಪಿಯವರು ದುರಹಂಕಾರಿಯಾಗಿದ್ದಾರೆ, ಅವರು ಇನ್ನು ಮುಂದೆ ಜನರ ಮಾತು ಕೇಳುವುದಿಲ್ಲ, ಪಂಜಾಬ್ ನ ಜನ ಮಾಡಿದಂತೆ ಆಮ್ ಆದ್ಮಿ ಪಕ್ಷಕ್ಕೂ ಒಂದು ಅವಕಾಶ ನೀಡಿ, ದೆಹಲಿಯ ಜನರು ಆಮ್ ಆದ್ಮಿಗೆ ಒಂದು ಅವಕಾಶ ನೀಡಿ. ಪಕ್ಷ, ನಿಮಗೆ ಇಷ್ಟವಿಲ್ಲದಿದ್ದರೆ ಮುಂದಿನ ಬಾರಿ ನಮ್ಮನ್ನು ಬದಲಾಯಿಸಿ, ಆಮ್ ಆದ್ಮಿ ಪಕ್ಷಕ್ಕೆ ಒಂದು ಅವಕಾಶ ನೀಡಿ, ನೀವು ಎಲ್ಲಾ ಪಕ್ಷಗಳನ್ನು ಮರೆತುಬಿಡುತ್ತೀರಿ ಎಂದು ಅವರು ಹೇಳಿದರು.
ರೋಡ್ ಶೋನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಮಾನ್, ದೆಹಲಿ ಮತ್ತು ಪಂಜಾಬ್ ನಂತರ ನಾವು ಗುಜರಾತ್ ಗೆಲುವಿಗೆ ತಯಾರಿ ನಡೆಸುತ್ತಿದ್ದೇವೆ ಎಂದು ಹೇಳಿದರು.