
ನವದೆಹಲಿ: ಭಾರತೀಯ ಜನತಾ ಪಕ್ಷ ಶುಕ್ರವಾರ ವಿವಿಧ ರಾಜ್ಯಗಳಿಗೆ ಪಕ್ಷದ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳ ಹೊಸ ತಂಡವನ್ನು ನೇಮಿಸಿದೆ.
ಮಾಜಿ ಸಿಎಂಗಳಾದ ವಿಜಯ್ ರೂಪಾನಿ ಮತ್ತು ಬಿಪ್ಲಬ್ ದೇಬ್ ಪಂಜಾಬ್, ಹರಿಯಾಣ ಜವಾಬ್ದಾರಿ ನೀಡಲಾಗಿದೆ. ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಹರಿಯಾಣದ ಉಸ್ತುವಾರಿ, ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಪಂಜಾಬ್-ಚಂಡೀಗಢದ ಉಸ್ತುವಾರಿ, ಬಿಹಾರದ ಮಾಜಿ ಸಚಿವ ಮಂಗಲ್ ಪಾಂಡೆ ಪಶ್ಚಿಮ ಬಂಗಾಳದ ಉಸ್ತುವಾರಿ ಮತ್ತು ಸಂಬಿತ್ ಪಾತ್ರಾ ಅವರು ಈಶಾನ್ಯ ರಾಜ್ಯಗಳ ಸಂಯೋಜಕರಾಗಿರುತ್ತಾರೆ.