ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಬಜಾಜ್ ಹೊಸ ಬೈಕ್ ನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈ ಬಗ್ಗೆ ಬಜಾಜ್ ವ್ಯವಸ್ಥಾಪಕ ರಾಜೀವ್ ಬಜಾಜ್ ಮಾಹಿತಿ ನೀಡಿದ್ದಾರೆ.
ಬಜಾಜ್ ಕಂಪನಿಯು ಟ್ರಯಂಫ್ ಹಾಗೂ ಕೆಟಿಎಂ ಸಹಭಾಗಿತ್ವದಲ್ಲಿ ನೂತನ ಬೈಕ್ ಗಳನ್ನು ಬಿಡುಗಡೆ ಮಾಡುವ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಕೆಲ ವರ್ಷಗಳಿಂದ ಪಲ್ಸರ್ ಸರಣಿ ಬೈಕ್ ಗಳು ಸಾಕಷ್ಟು ಡಿಮ್ಯಾಂಡ್ ಹೊಂದಿವೆ. ಈ ನಡುವೆ ಇತ್ತೀಚೆಗೆ ಲಾಂಚ್ ಆಗಿದ್ದ ಟ್ರಯಂಫ್ ಸ್ಪೀಡ್ 400 ಬೈಕ್ ಗಳಿಗೂ ಭಾರತದ ಗ್ರಾಹಕರಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.
ಅಲ್ಲದೇ ವಾರಗಳ ಹಿಂದಷ್ಟೇ ಬಜಾಜ್ ಪಾಲುದಾರಿಕೆಯಲ್ಲಿ ಬಿಡುಗಡೆಗೊಂಡ ಕೆಟಿಎಂ 250 ಡ್ಯೂಕ್, 390 ಡ್ಯೂಕ್ ಬೈಕ್ ಕೂಡ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇದೀಗ ಶೀಘ್ರದಲ್ಲಿಯೇ ಬಜಾಜ್ 100cc CNG ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ರಾಜೀವ್ ಬಜಾಜ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಕಡಿಮೆ ದರದಲ್ಲಿ ಹಾಗೂ ಗ್ರಾಹಕರಿಗೆ ಇನ್ನಷ್ಟು ಇಷ್ಟವಾಗುವಂತಹ ರೀತಿಯಲ್ಲಿ ಈ ಬೈಕ್ ಬರಲಿದೆ. ಅಲ್ಲದೇ ಇದೇ ಆರ್ಥಿಕ ವರ್ಷದಲ್ಲಿ ಇನ್ನಷ್ಟು ಹೊಸ ಪಲ್ಸರ್ ಬೈಕ್ ಗಳು ಕೂಡ ಮಾರುಕಟ್ಟೆಗೆ ಬರಲಿರುವುದಾಗಿ ಹೇಳಿದ್ದಾರೆ.