
ತಲ್ಚರ್: ನವವಿವಾಹಿತೆಯೊಬ್ಬಳು ತನ್ನ ಮದುವೆಯಾದ ನಾಲ್ಕನೇ ದಿನವೇ ಗಂಡನನ್ನು ತ್ಯಜಿಸಿದ್ದಾಳೆ. ಈ ಘಟನೆ ಒಡಿಶಾದ ಅಂಗುಲ್ ಜಿಲ್ಲೆಯ ತಲ್ಚರ್‌ನಲ್ಲಿ ನಡೆದಿದೆ.
ಮಹಿಳೆ ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಳು ಮತ್ತು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಪತಿಯನ್ನು ತ್ಯಜಿಸಿ ಪ್ರಿಯಕರನೊಂದಿಗೆ ಹೋಗಿದ್ದಾಳೆ.
ಮಹಿಳೆ ಬೇರೆ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಅವಳ ಇಚ್ಛೆಗೆ ವಿರುದ್ಧವಾಗಿ ಇನ್ನೊಬ್ಬ ಪುರುಷನೊಂದಿಗೆ ಮದುವೆಯಾಗಿದ್ದಳು. ತನ್ನ ಪ್ರೇಮಿಯನ್ನು ಮರೆಯಲು ಸಾಧ್ಯವಾಗದ ಮಹಿಳೆ ತನ್ನ ಮದುವೆಯಾದ ನಾಲ್ಕನೇ ದಿನದಂದು ತನ್ನ ಗಂಡನನ್ನು ತ್ಯಜಿಸಲು ನಿರ್ಧರಿಸಿದ್ದಾಳೆ.
ಅವಳು ತನ್ನ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿ ತನ್ನ ಪ್ರೇಮಿಯ ಬಳಿಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾಳೆ. ಮದುವೆಯ ನಾಲ್ಕನೇ ದಿನ ಚತುರ್ಥಿಯು ನವವಿವಾಹಿತರು ತಮ್ಮ ಮೊದಲ ರಾತ್ರಿಯ ಮೊದಲು ಪೂಜೆ ಮತ್ತು ಯಜ್ಞಕ್ಕಾಗಿ ಕುಳಿತುಕೊಳ್ಳುವ ಆಚರಣೆಯಾಗಿದೆ.
ಫೆಬ್ರವರಿ 18 ರಂದು, ಪಟ್ಟಣದ ಬಡಾ ದಂಡಾ ಬೀದಿಯ ವ್ಯಕ್ತಿಯೊಬ್ಬ ಬರ್ಪಲಾ ಬ್ಲಾಕ್ ನ ಮಹಿಳೆಯನ್ನು ಮದುವೆಯಾಗಿದ್ದು, ಮದುವೆಯ ನಂತರ ಮಹಿಳೆ ತನ್ನ ತಂದೆಯ ಮನೆ ತೊರೆದು ಅತ್ತೆಯೊಂದಿಗೆ ಇದ್ದಳು. ನಾಲ್ಕನೇ ದಿನ(ಚತುರ್ಥಿ) ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿರುವುದಾಗಿ ಹೇಳಿದ್ದಾಳೆ. ತನ್ನ ತಾಯಿ ತನ್ನನ್ನು ಮದುವೆಗೆ ಒತ್ತಾಯಿಸಿದ್ದಳು. ಮದುವೆಗೆ ಒಪ್ಪದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವಳ ತಂದೆ ಬೆದರಿಕೆ ಹಾಕಿದ್ದ ಎಂದು ಆಕೆ ತಿಳಿಸಿದ್ದು, ತಮ್ಮ ಮದುವೆಯನ್ನು ಮುರಿಯಲು ಬಯಸುವುದಾಗಿ ತನ್ನ ಅತ್ತೆ-ಮಾವಂದಿರಿಗೆ ಹೇಳಿದ್ದಾಳೆ.
ಕಂಗಾಲಾದ ಅತ್ತೆ, ಮಾವ ಆಕೆಯ ಪೋಷಕರಿಗೆ ಮಾಹಿತಿ ನೀಡಿದರು. ನಂತರ ಎರಡೂ ಕುಟುಂಬಗಳು ಪೊಲೀಸರ ಮೊರೆ ಹೋಗಿದ್ದಾರೆ.. ಪೊಲೀಸರ ಎದುರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಮಹಿಳೆ ತನ್ನ ಪ್ರಿಯಕರನ ಬಳಿಗೆ ತೆರಳಿದ್ದಾಳೆ.