
ಕಳೆದ ವರ್ಷ ಗುಟ್ಖಾ ಪ್ಯಾಕೆಟ್ ಖರೀದಿಸಿದ ಗ್ರಾಹಕರಿಂದ 10 ರೂಪಾಯಿ ಪಾವತಿಯಾಗದ ಕಾರಣ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಅಂಗಡಿ ನಡೆಸ್ತಿದ್ದ ಜಿತೇಂದ್ರ ಪೊಲೀಸರಿಗೆ ಕರೆ ಮಾಡಿ ದೂರಿದ್ದಾರೆ.
ಅಂಗಡಿಯಿಂದ ಗುಟ್ಕಾ ಪ್ಯಾಕೆಟ್ ಖರೀದಿಸಿದ ಸಂಜಯ್ ಹಣ ನೀಡುವುದಾಗಿ ಭರವಸೆ ನೀಡಿ ಬಳಿಕ ಎಷ್ಟು ಬಾರಿ ಕೇಳಿದರೂ ಹಣ ನೀಡುತ್ತಿರಲಿಲ್ಲ. ತಿಂಗಳು ಕಳೆದರೂ ಹಣ ನೀಡದೇ ಇದ್ದಿದ್ರಿಂದ ಸಂಜಯ್‌ನ ವರ್ತನೆಯಿಂದ ಹತಾಶೆಗೊಂಡ ಜಿತೇಂದ್ರ ನಂತರ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರು.
ನಂತರ ಪೊಲೀಸರು ಗ್ರಾಮಕ್ಕೆ ಆಗಮಿಸಿ ಅಂಗಡಿಯವನಿಗೆ ಹಣ ವಾಪಸು ಸಿಗುವಂತೆ ಕ್ರಮ ತೆಗೆದುಕೊಂಡರು. ಜಿತೇಂದ್ರ ಮತ್ತು ಸಂಜಯ್ ಇಬ್ಬರೂ ಒಟ್ಟಿಗೆ ನಿಂತಿರುವ ವಿಡಿಯೋ ಕೂಡ ಇದೀಗ ವೈರಲ್ ಆಗಿದ್ದು ವಿಡಿಯೊದಲ್ಲಿ ಜಿತೇಂದ್ರ ಅವರು ಹಣ ವಾಪಸ್ ಪಡೆದಿರುವುದನ್ನು ದೃಢಪಡಿಸಿರುವುದನ್ನು ಕಾಣಬಹುದು.
अजब गजब मामला……
हरदोई में सांडी में 10 रुपये की उधारी दिलाने पहुंची पुलिस , ग्राहक ने डेढ़ साल पहले खरीदी थी 10 रुपये की गुटखा, सांडी के भंडारी गांव से एक अजीबो गरीब विवाद में पुलिस के पहुंचने का वीडियो वायरल हुआ है ।पान पुड़िया की गांव में छोटी सी दुकान चलाने वाले दिव्यांग… pic.twitter.com/KCCCZa1x00
— Awanish M Vidyarthi (@awanishvidyarth) December 1, 2024