alex Certify ರೈಲಿನ ಇಂಜಿನ್ ಅಡಿಯಲ್ಲಿ ಕೂತು 190 ಕಿ.ಮೀ. ಪ್ರಯಾಣ ಮಾಡಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನ ಇಂಜಿನ್ ಅಡಿಯಲ್ಲಿ ಕೂತು 190 ಕಿ.ಮೀ. ಪ್ರಯಾಣ ಮಾಡಿದ ಭೂಪ…!

Bizarre! Bihar Youth Travels 190 Kms Sitting Under A Train's Engine, Rescued

ರೈಲಿನಲ್ಲಿ ಪ್ರಯಾಣಿಸುವವರನ್ನ ಗಮನಿಸಿದ್ದಿರಾ ? ಒಂದೇ ಒಂದು ಸೀಟ್​​ಗಾಗಿ ಜನ ಎಷ್ಟು ಸರ್ಕಸ್ ಮಾಡ್ತಾರೆ ಅನ್ನೋದನ್ನ ನೋಡಿದ್ದಿರಾ..? ಸೀಟ್ ಸಿಕ್ಕಿಲ್ಲ ಅಂದ್ರೆ ನಿಂತ ಜಾಗದಲ್ಲೇ ಸ್ವಲ್ಪ ಜಾಗ ಮಾಡಿಕೊಂಡು ಕುಳಿತುಕೊಳ್ತಾರೆ. ಇಲ್ಲಾ ಬಾಗಿಲ ಹತ್ತಿರ ಹೋಗಿ ಸೆಟಲ್ ಆಗ್ತಾರೆ. ಅದೂ ಆಗಿಲ್ಲ ಅಂದ್ರೆ, ಟಾಯ್ಲೆಟ್ ಬಾಗಿಲ ಮುಂದೋ ಇಲ್ಲಾ ಟಾಪ್ ಮೇಲೆ ಹತ್ತಿ ಕುಳಿತುಕೊಳ್ತಾರೆ. ಆದರೆ ಇಲ್ಲೊಬ್ಬ ಮಹಾನುಭಾವ ಇದ್ದಾನೆ ನೋಡಿ ಆತ ಸುಮಾರು 190 ಕಿ.ಮೀ. ದೂರವನ್ನು ರೈಲಿನ ಇಂಜಿನ್ ಕೆಳಗೆ ಕುಳಿತು ಪಯಣಿಸಿದ್ದಾನೆ.

ಬಿಹಾರದ ರಾಜ್​​ಗರ್ನಿಯಿಂದ ಗಯಾದವರೆಗೆ ಈ ವ್ಯಕ್ತಿ ಇಂಜಿನ್ ಕೆಳಗೆ ಕುಳಿತು ಪ್ರಯಾಣ ಬೆಳೆಸಿದ್ದಾನೆ. ಒಂದಲ್ಲ, ಎರಡಲ್ಲ 190ಕಿ.ಮೀ ದೂರದವರೆಗೆ ಪ್ರಯಾಣ ಬೆಳೆಸೋದು ಅಂದ್ರೆ ಸಾಮಾನ್ಯ ಮಾತಾ…! ಆದರೂ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಗೊತ್ತೇ ಆಗಿಲ್ಲ. ಕೊನೆಗೆ ರೈಲಿನ ಚಾಲಕ ಗಮನಕ್ಕೆ ಬಂದ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾನೆ.

ರೈಲಿನ ಇಂಜಿನ್ ಕೆಳಗೆ ಕುಳಿತ ವ್ಯಕ್ತಿಯನ್ನ ಬಂಧಿಸಿರೋ ರೈಲ್ವೆ ಪೊಲೀಸ್, ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ಯಾವುದೇ ಸರಿಯಾದ ಮಾಹಿತಿ ಸಿಗದೆ ಆ ವ್ಯಕ್ತಿಯನ್ನ ಬಿಟ್ಟುಬಿಟ್ಟಿದ್ದಾರೆ.

ಕನಸಿನಲ್ಲಿ ‘ಚಿನ್ನ’ದ ಆಭರಣ ಕಂಡ್ರೆ ಇದೆ ಈ ಅರ್ಥ

ರೈಲ್ವೆ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬುದ್ಧ ಪೂರ್ಣಿಮಾ ಎಕ್ಸ್​ಪ್ರೆಸ್​ನಲ್ಲಿ ಸೋಮವಾರ ಮುಂಜಾನೆ 4 ಗಂಟೆಗೆ ರಾಜ್​​ಗರ್ನಿಯಿಂದ ಗಯಾಕ್ಕೆ ಪ್ರಯಾಣ ಬೆಳೆಸಿದ್ದಾನೆ. ಈ ನಡುವೆ ರೈಲು ಗಯಾ ಪ್ಲಾಟ್​ಫಾರ್ಮ್​ಗೆ ಬರುತ್ತಿದ್ದಂತೆ ಇಂಜಿನ್ ಕೆಳಗಿನಿಂದ ಶಬ್ದ ಬಂದಿದೆ.

ಈ ವೇಳೆ ಪರಿಶೀಲನೆ ನಡೆಸಿದಾಗ ವ್ಯಕ್ತಿ ಇರುವುದು ಕಂಡು ಬಂದಿದೆ. ಅಚ್ಚರಿ ಪಡುವ ಸಂಗತಿ ಎಂದರೆ, ಆ ವ್ಯಕ್ತಿ ಕುಳಿತುಕೊಂಡಿದ್ದ ಜಾಗ ಒಬ್ಬ ವ್ಯಕ್ತಿ ಕುಳಿತುಕೊಳ್ಳೊದಕ್ಕೆ ಸಾಧ್ಯವೇ ಆಗದಷ್ಟು ಚಿಕ್ಕದಿದೆ. ಆದರೂ ಅಷ್ಟೆ ಜಾಗದಲ್ಲಿ ಸುಡುತ್ತಿರುವ ಇಂಜಿನ್ ಕೆಳಗೆ ಕೂತು ಆ ವ್ಯಕ್ತಿ ಅಷ್ಟು ದೂರದಿಂದ ಪ್ರಯಾಣ ಬೆಳೆಸಿದ್ದಾನೆ. ಕೊನೆಗೆ 190 ಕಿ.ಮೀ ದೂರ ರೈಲ್ವೆ ಚಲಿಸಿದ ನಂತರ ಆ ಇಂಜಿನ್ ಶಾಖಕ್ಕೆ ಸುಸ್ತಾಗಿ ಬಳಲಿ ಬಿದ್ದಿದ್ದಾನೆ. ಆತ ಕಿರುಚಿ ಬಿದ್ದ ನಂತರವೇ ಬೇರೆಯವರಿಗೆ ಗೊತ್ತಾಗಿದ್ದು, ಅಲ್ಲಿ ಯಾರೋ ಕೂತಿದ್ದಾರೆ ಅಂತ. ಹಾಗೆ ಬಿದ್ದ ವ್ಯಕ್ತಿಯನ್ನ ಬಂಧಿಸಿದ ನಂತರ ಆತನ ಈ ಘನಂದಾರಿ ಕೆಲಸದ ಬಗ್ಗೆ ಕೇಳಿದರೂ ಆತನ ಬಳಿ ಯಾವುದೇ ಉತ್ತರ ಇರಲಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...