alex Certify ವಿಚಿತ್ರವೆನಿಸಿದರೂ ಇದು ಸತ್ಯ…! ಜಪಾನ್‌ ನಲ್ಲಿ ಮಾತ್ರ ಕಂಡು ಬರುತ್ತೆ ಈ 5 ವಿಶಿಷ್ಟ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರವೆನಿಸಿದರೂ ಇದು ಸತ್ಯ…! ಜಪಾನ್‌ ನಲ್ಲಿ ಮಾತ್ರ ಕಂಡು ಬರುತ್ತೆ ಈ 5 ವಿಶಿಷ್ಟ ಸಂಗತಿ

ಉದಯಿಸುವ ಸೂರ್ಯನ ನಾಡು ಎಂಬ ಖ್ಯಾತಿಯ ಜಪಾನ್‌ನಲ್ಲಿ ವಿಶಿಷ್ಟ ಸಂಸ್ಕೃತಿ ಮತ್ತು ಶ್ರಮ-ಬುದ್ಧಿವಂತಿಕೆಯ ಕೆಲಸಕ್ಕೆ ಜನರು ಹೆಸರು ವಾಸಿಯಾಗಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಗೆ ಹೆಸರುವಾಸಿಯಾಗಿ, ರೋಬಾಟ್‌ಗಳು, ಬುಲೆಟ್‌ ರೈಲುಗಳ ನಾಡು ಎಂದೇ ಜಪಾನ್‌ ಜಗತ್ತಿಗೆ ಪರಿಚಿತ ಕೂಡ. ಇಂಥ ವಿಶೇಷ ರಾಷ್ಟ್ರದಲ್ಲಿ ಐದು ವಿಚಿತ್ರಗಳು ನಿಮಗೆ ಕಾಣಸಿಗುತ್ತವೆ!

1. ಕಡ್ಲ್‌ಕೆಫೇಸ್‌ (ಅಪ್ಪುಗೆಯ ತಾಣ) :

Bizarre! 5 Weirdest Things You Can Only Find in Japan

ಬಹಳ ಶ್ರಮಜೀವಿಗಳಾದ ಜಪಾನಿಯರಿಗೆ ಪುರುಸೊತ್ತಿನ ಸಮಯದಲ್ಲಿ ಮನಸ್ಸಿಗೆ ಮುದ ನೀಡುವ ಅಪ್ಪುಗೆ, ಮಿತ ಹರಟೆ ಬಹಳ ಇಷ್ಟವಂತೆ. ಹಾಗಾಗಿ ಅಲ್ಲಿನ ಜನರ ಬೇಡಿಕೆಯಂತೆ ’ಅಪ್ಪುಗೆ ತಾಣ’ಗಳನ್ನು ರಸ್ತೆಗಳಲ್ಲಿ ಹಲವು ಕಡೆಗಳಲ್ಲಿ ಕಾಣಬಹುದು. ತಮ್ಮ ಸ್ನೇಹಿತರು, ಪ್ರೇಯಸಿ-ಪ್ರಿಯಕರನೊಂದಿಗೆ ಹಲವರು ಈ ತಾಣಗಳಲ್ಲಿ ಕುಳಿತು ಅಪ್ಪಿಕೊಂಡು ಆಪ್ತ ಸಂಭಾಷಣೆ ನಡೆಸುವುದು ಅಥವಾ ಸಣ್ಣ ನಿದ್ರೆ ಮಾಡಿಕೊಂಡು ರಿಫ್ರೆಷ್‌ ಆಗುತ್ತಾರಂತೆ.

2. ದಿ ಶಿಬುಯ ಕ್ರಾಸಿಂಗ್‌ :

Bizarre! 5 Weirdest Things You Can Only Find in Japan

ಟೋಕಿಯೊದಲ್ಲಿರುವ ಇದು ಜಗತ್ತಿನಲ್ಲೇ ಅತಿ ಬ್ಯುಸಿಯಾದ ರಸ್ತೆ ದಾಟುವಿಕೆ ಮಾರ್ಗ ಎಂದೆನಿಸಿದೆ. ಇಲ್ಲಿ ಕೆಂಪು ಸಿಗ್ನಲ್‌ ಬಿದ್ದ ಕೂಡಲೇ ಜನರು ಒಂದು ರಸ್ತೆ ಬದಿಯಿಂದ ಮತ್ತೊಂದು ಕಡೆಗೆ ಧಾವಿಸುವುದು ನೋಡುವುದೇ ವಿಶೇಷ ದೃಶ್ಯ.

3. ವೆಂಡಿಂಗ್‌ ಮಷೀನ್‌ :

Bizarre! 5 Weirdest Things You Can Only Find in Japan

ಭಾರತದಲ್ಲಿ ಹಣ ವಿತ್‌ಡ್ರಾ ಮಾಡಲು ಎಟಿಎಂ ಎಂಬ ಮಷೀನ್‌ ಮಾತ್ರವೇ ಜನಪ್ರಿಯವಾಗಿದೆ. ಇನ್ನು ಸೂಪರ್‌ ಮಾರ್ಕೆಟ್‌ಗಳಲ್ಲಿ ಜ್ಯೂಸ್‌, ಕೋಲಾ ಪಾನೀಯಗಳನ್ನು ಪಡೆಯಲು ಜನರು ವೆಂಡಿಂಗ್‌ ಮಷೀನ್‌ಗಳನ್ನು ಬಳಸುವುದನ್ನು ಕಾಣಬಹುದು.

ಯಾವ ಸಿಬ್ಬಂದಿ ಸಹಾಯವೂ ಇಲ್ಲದೆಯೇ ಕೇವಲ ಮಷೀನ್‌ಗೆ ಹಣ ಹಾಕಿ, ನಿಮಗೆ ಇಷ್ಟವಾದ ವಸ್ತುವನ್ನು ಮಷೀನ್‌ ಒಳಗಿನಿಂದ ಪಡೆಯುವುದೇ ಈ ವೆಂಡಿಂಗ್‌ ಮಷೀನ್‌ ಎಂಬ ಜಾದೂ ಪೆಟ್ಟಿಗೆ.

ಜಪಾನ್‌ನಲ್ಲಿ ಮನುಷ್ಯರ ಸಂಖ್ಯೆಗೆ ಹತ್ತಿರಹತ್ತಿರವಾಗುತ್ತಿದೆ ಈ ಮಷೀನ್‌ಗಳ ಸಂಖ್ಯೆ. ಸ್ನ್ಯಾಕ್ಸ್‌ನಿಂದ ಹಿಡಿದು ಒಳ‌ ಉಡುಪು – ಬನಿಯನ್‌ವರೆಗೂ ಎಲ್ಲವನ್ನೂ ಜಪಾನೀಯರು ವೆಂಡಿಂಗ್‌ ಮಷೀನ್‌ ಮೂಲಕವೇ ಪಡೆಯುತ್ತಿದ್ದಾರೆ. ದೇಶಾದ್ಯಂತ 50 ಲಕ್ಷ ಮಷೀನ್‌ಗಳು ಕಾರ್ಯನಿರ್ವಹಿಸುತ್ತಿವೆ.

4. ವಿಶ್ವದ ಅತಿ ಚಿಕ್ಕ ಎಸ್ಕಲೇಟರ್‌ :

Bizarre! 5 Weirdest Things You Can Only Find in Japan

ಕವಾಸಾಕಿಯ ಮೋರ್ಸ್‌ ಡಿಪಾರ್ಟ್‌ಮೆಂಟ್‌ ಸ್ಟೋರ್‌ನಲ್ಲಿ ವಿಶ್ವದಲ್ಲೇ ಅತಿ ಚಿಕ್ಕದಾದ ಎಸ್ಕಲೇಟರ್‌ (ಚಲಿಸುವ ಮೆಟ್ಟಿಲುಗಳು) ಇದೆ. ಕೇವಲ 83.4 ಸೆ.ಮೀ ಇದರ ಎತ್ತರವಾಗಿದೆ. ಕೆಳಗಿನಿಂದ ಮೇಲಕ್ಕೆ ಒಬ್ಬ ವ್ಯಕ್ತಿಯನ್ನು 8 ಸೆಕೆಂಡ್‌ಗಳಲ್ಲಿ ತಲುಪಿಸುತ್ತದೆ.

ಮೊಸಳೆಯ ಹೊಟ್ಟೆಯೊಳಗಿತ್ತು ಆರು ಸಾವಿರ ವರ್ಷಗಳಷ್ಟು ಹಿಂದಿನ ಕಲಾಕೃತಿ…!

5. ಆಕ್ಟೋಪಸ್‌ ರುಚಿಯ ಐಸ್‌ಕ್ರೀಮ್‌ :

ನಾನ್‌ ವೆಜ್‌ ಪ್ರಿಯರಿಗೆ ಮಾತ್ರವೇ ಈ ಸುದ್ದಿ ಇಷ್ಟವಾಗಬಹುದು. ಸಮುದ್ರ ಆಹಾರದಲ್ಲಿ ಆಕ್ಟೋಪಸ್‌ ತಿನ್ನುವ ಪ್ರಿಯರನ್ನು ಸಂತೈಸಲು ಅದರ ರುಚಿಯನ್ನೇ ಹೋಲುವ ಐಸ್‌ಕ್ರೀಮ್‌ ಬಾರ್‌ಗಳನ್ನು ಜಪಾನ್‌ನಲ್ಲಿ ಕಾಣಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...