ಕೆಮ್ಮುವಾಗ ಮೂಳೆ ಮುರಿಯಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ ? ಇಂತಹ ಯೋಚನೆ ನಡುವೆ ಚೀನಾದಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ಕೆಮ್ಮುವಾಗ ದೇಹದ ಅತ್ಯಂತ ಗಟ್ಟಿಯಾದ ಮೂಳೆಯನ್ನು ಮುರಿದುಕೊಂಡಿದ್ದಾರೆ.
ಚೀನಾದ ಫುಜಿಯಾನ್ ಪ್ರಾಂತ್ಯದಲ್ಲಿ ವೈದ್ಯರೊಬ್ಬರು ಕೆಮ್ಮುವಾಗ ತಮ್ಮ ಎಲುಬು ಮೂಳೆ ಮುರಿದಿದೆ ಎಂದು ತಿಳಿದಾಗ ಆಘಾತಕ್ಕೊಳಗಾದರು. ಬಲವಾದ ಕೆಮ್ಮಿನ ನಂತರ ಹೆಚ್ಚಿನ ನೋವನ್ನು ಅನುಭವಿಸಿ, ನಡೆಯಲು ಕಷ್ಟವಾದಾಗ ವೈದ್ಯಕೀಯ ಸಹಾಯದ ಮೊರೆ ಹೋದರು.
ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ನಿರ್ದೇಶಕರು ಪರೀಕ್ಷಿಸಿ ಇದೊಂದು ಅಸಾಮಾನ್ಯ ಪ್ರಕರಣವಾಗಿದ್ದು 30- 35 ವರ್ಷ ವಯಸ್ಸಿನ ಪುರುಷರು ಸಾಮಾನ್ಯವಾಗಿ ಕಾರು ಅಪಘಾತಗಳು ಅಥವಾ ಎತ್ತರದಿಂದ ಬೀಳುವಂತಹ ಗಂಭೀರವಾದ ಆಘಾತಗಳಿಂದ ಎಲುಬು ಮೂಳೆ ಮುರಿದುಕೊಳ್ಳುವಂತಹದ್ದಾಗಿರಲಿಲ್ಲ ಎಂದಿದ್ದಾರೆ. ವೈದ್ಯರು ಹೆಚ್ಚಿನ ಪರೀಕ್ಷೆಗಳನ್ನು ನಡೆಸಿದಾಗ ವೈದ್ಯರ ಮೂಳೆ ಸಾಂದ್ರತೆಯು 80 ವರ್ಷ ವಯಸ್ಸಿನ ವ್ಯಕ್ತಿಯಂತೆಯೇ ಇದೆ ಎಂಬುದನ್ನ ಕಂಡುಕೊಂಡು ಇದು ವಿಚಿತ್ರವಾಗಿದೆ ಎಂದಿದ್ದಾರೆ.
ಹೆಚ್ಚಿನ ಪರೀಕ್ಷೆ ನಡೆಸಿ, ವೈದ್ಯ ಯಾವುದೇ ಮೂಳೆ ಕಾಯಿಲೆ ಅಥವಾ ದೈಹಿಕ ಆಘಾತವನ್ನು ಹೊಂದಿಲ್ಲ. ಬದಲಾಗಿ ಕಳಪೆ ಆಹಾರ ಸೇವನೆ ಮತ್ತು ವ್ಯಾಯಾಮದ ಕೊರತೆಯಿಂದಾಗಿ ದುರ್ಬಲವಾದ ಮೂಳೆಗಳನ್ನು ಹೊಂದಿರುವುದಾಗಿ ವೈದ್ಯಾಧಿಕಾರಿಗಳು ತೀರ್ಮಾನಿಸಿದರು. ವೈದ್ಯ ನೀರಿನ ಬದಲಿಗೆ ಸಿಹಿ ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸುತ್ತಿದ್ದರಂತೆ.
ಮತ್ತೊಂದು ಘಟನೆಯಲ್ಲಿ 27 ವರ್ಷದ ವ್ಯಕ್ತಿ ಮಲಗಿದ್ದಾಗ ಆತನ ಶಿಶ್ನ ಎರಡು ಜಾಗದಲ್ಲಿ ಮುರಿದುಕೊಂಡಿರುವ ವರದಿಯಾಗಿದೆ. ನಿದ್ರಿಸುವಾಗ ಶಿಶ್ನ ನಿಮಿರಿದ್ದು ತಿರುಗಿದ ನಂತರ ಮುರಿತದಂತಹ ಶಬ್ದ ಕೇಳಿದ್ದಾನೆ. ಪರೀಕ್ಷೆ ನಡೆಸಿದ ಬಳಿಕ ಮುರಿದ ಭಾಗವನ್ನು ಶಸ್ರ್ನಚಿಕಿತ್ಸೆ ಮೂಲಕ ಸರಿಪಡಿಸಲಾಗಿದೆ.
ವ್ಯಕ್ತಿಗೆ ಹೆಚ್ಚಿನ ತೊಂದರೆಯಾಗದೇ ಎರಡು ದಿನಗಳಲ್ಲಿ ಊತ ಕಡಿಮೆಯಾಗಿದೆ. ಶಸ್ತ್ರಚಿಕಿತ್ಸೆಯ ನಾಲ್ಕು ದಿನಗಳ ನಂತರ ವ್ಯಕ್ತಿ ಎಂದಿನಂತೆ ಮೂತ್ರ ವಿಸರ್ಜಿಸಲು ಸಾಧ್ಯವಾಗಿದೆ.