ಹಾಗಲಕಾಯಿ ರುಚಿಯಲ್ಲಿ ಕಹಿ ಎನಿಸಿದರೂ ಆರೋಗ್ಯಕ್ಕೆ ಹಿತಕಾರಿ. ವಿಟಮಿನ್ ಸಿ, ಎ, ಕಬ್ಬಿಣಾಂಶ ಹಾಗೂ ಪೊಟ್ಯಾಶಿಯಂಗಳನ್ನು ಒಳಗೊಂಡ ಹಾಗಲಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಶಕ್ತಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಮಧುಮೇಹವನ್ನು ನಿಯಂತ್ರಣದಲ್ಲಿರಿಸುವ, ರಕ್ತ ಶುದ್ಧೀಕರಿಸುವ ಗುಣಗಳನ್ನು ಹೊಂದಿರುವ ಹಾಗಲಕಾಯಿಯ ಕೆಲವೊಂದು ಪ್ರಯೋಜನಗಳು ಇಲ್ಲಿವೆ.
* 3 ಚಮಚ ಹಾಗಲಕಾಯಿ ರಸಕ್ಕೆ ಒಂದು ಚಮಚ ನಿಂಬೆ ರಸ ಬೆರೆಸಿ ಕುಡಿದರೆ ರಕ್ತ ಶುದ್ಧಿಯಾಗುತ್ತದೆ ಹಾಗೂ ಚರ್ಮ ರೋಗದ ಸಮಸ್ಯೆಗಳು ನಿವಾರಣೆಯಾಗುತ್ತವೆ.
* ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಕಾಲು ಕಪ್ ತಾಜಾ ಹಾಗಲಕಾಯಿ ರಸಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯಬೇಕು.
* ಹಾಗಲಕಾಯಿ ರಸವನ್ನು ಕುಡಿಯುವುದರಿಂದ ಹೊಟ್ಟೆ ಸುತ್ತಲೂ ಶೇಖರಣೆಗೊಂಡ ಬೊಜ್ಜು ಕರಗುತ್ತದೆ.
* ತಲಾ ಎರಡು ಚಮಚ ಹಾಗಲಕಾಯಿ ರಸ, ಕೊತ್ತಂಬರಿ ಬೀಜದ ಪುಡಿ ಹಾಗೂ ಅರ್ಧ ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿದರೆ ಜಂತುಹುಳುಗಳಿಂದ ಉಪಶಮನ ಸಿಗುತ್ತದೆ.
* ತಲಾ 2 ಚಮಚ ಹಾಗಲಕಾಯಿ ರಸ ಹಾಗೂ ನಿಂಬೆರಸವನ್ನು ಸೇರಿಸಿ ಕುಡಿದರೆ ಋತುಸ್ರಾವದ ನೋವು ದೂರವಾಗುತ್ತದೆ.
* ಬಾಣಂತಿಯರು ಏಳೆಂಟು ಹಾಗಲಕಾಯಿ ಎಲೆಗಳನ್ನು ನೀರಿನಲ್ಲಿ ಕುದಿಸಿ, ತಣಿಸಿ, ಶೋಧಿಸಿ ಕುಡಿದರೆ ರಕ್ತ ಶುದ್ಧಿಯಾಗುವುದರ ಜೊತೆಗೆ ಎದೆ ಹಾಲು ವೃದ್ಧಿಯಾಗುತ್ತದೆ.