ಆರೋಗ್ಯವಾಗಿರಬೇಕೆಂದರೆ ಬೆಳಗ್ಗೆ ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಪ್ರತಿದಿನ ಬೆಳಗ್ಗೆ ಒಂದೆರಡು ಕಹಿಬೇವಿನ ಸೊಪ್ಪನ್ನು ಜಗಿದು ತಿನ್ನುವ ಅಭ್ಯಾಸ ಮಾಡಿಕೊಂಡರೆ ಹೊಟ್ಟೆಯ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತವೆ. ಕಹಿಬೇವು ಆರೋಗ್ಯಕ್ಕೆ ರಾಮಬಾಣವೆಂದು ಪರಿಗಣಿಸಲಾಗುತ್ತದೆ.
ಮೊಡವೆಗೆ ಮದ್ದು
ಬೇವಿನ ಎಲೆಗಳು ತುಂಬಾ ಕಹಿಯಾಗಿರುತ್ತವೆ. ಅದನ್ನ ಜಗಿದು ತಿನ್ನುವುದು ಕಷ್ಟ. ಆದರೆ ಅದರಲ್ಲಿ ಅನೇಕ ಪೋಷಕಾಂಶಗಳಿವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಜಗಿಯುವುದರಿಂದ ಮುಖದ ಮೇಲಿನ ಮೊಡವೆಗಳು ನಿವಾರಣೆಯಾಗುತ್ತವೆ. ಚರ್ಮ ಕೂಡ ಹೊಳಪು ಪಡೆದುಕೊಳ್ಳುತ್ತದೆ.
ರೋಗನಿರೋಧಕ ಶಕ್ತಿ
ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ತಿನ್ನುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಗಮನಾರ್ಹವಾಗಿ ಹೆಚ್ಚಾಗುತ್ತದೆ. ದೇಹವನ್ನು ಸಂಪೂರ್ಣವಾಗಿ ಸದೃಢವಾಗಿಡಲು ಪ್ರತಿದಿನ ಕಹಿಬೇವಿನ ಎಲೆಗಳನ್ನು ಅಗಿಯಬೇಕು. ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಇದು ತುಂಬಾ ಪ್ರಯೋಜನಕಾರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಸಹ ನೆರವಾಗುತ್ತದೆ.
ಜೀರ್ಣಕ್ರಿಯೆ
ಕಹಿ ಬೇವಿನಲ್ಲಿ ಅಸಂಖ್ಯಾತ ಪ್ರಯೋಜನಗಳಿವೆ. ಜನರು ಬೇವನ್ನು ವಿವಿಧ ಉದ್ದೇಶಗಳಿಗಾಗಿ ಬಳಸುತ್ತಾರೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಇದು ತುಂಬಾ ಪ್ರಯೋಜನಕಾರಿ.
ವಾಕರಿಕೆ ಮತ್ತು ವಾಂತಿ
ದೇಹದಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸುವ ಮೂಲಕ ಕಹಿ ಬೇವು ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ವಾಕರಿಕೆ ಮತ್ತು ವಾಂತಿಯ ಸಮಸ್ಯೆ ಇದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಹಿ ಬೇವಿನ ಎಲೆಯನ್ನು ಅಗಿಯಬೇಕು. ದೇಹದಲ್ಲಿನ ಊತವನ್ನು ಕೂಡ ಇದು ಕಡಿಮೆ ಮಾಡುತ್ತದೆ.
ದೃಷ್ಟಿಶಕ್ತಿ ಹೆಚ್ಚಳ
ದೃಷ್ಟಿ ಉತ್ತಮವಾಗಿರಬೇಕೆಂದರೆ ನಿತ್ಯ ಖಾಲಿ ಹೊಟ್ಟೆಯಲ್ಲಿ ಕಹಿ ಬೇವನ್ನು ತಿನ್ನಿ. ಕೆಮ್ಮು ಮತ್ತು ಬಾಯಾರಿಕೆಯನ್ನು ಕೂಡ ಇದು ಕಡಿಮೆ ಮಾಡುತ್ತದೆ. ಸಾಧ್ಯವಾದಲ್ಲಿ ದಿನಕ್ಕೆ 4-5 ಎಲೆಗಳನ್ನು ಅಗಿಯಬೇಕು. ಮಧುಮೇಹ ರೋಗಿಗಳಿಗೆ ಕೂಡ ಇದರಿಂದ ಅನೇಕ ಪ್ರಯೋಜನಗಳಿವೆ.