alex Certify ಮಂಡಿ ನೋವಿಗೆ ಮದ್ದು ಹಾಗಲಕಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಡಿ ನೋವಿಗೆ ಮದ್ದು ಹಾಗಲಕಾಯಿ

ಹಾಗಲಕಾಯಿ ಬಾಯಿಗೆ ಕಹಿ ಎಂಬುದೇನೋ ನಿಜ. ಆದರೆ ಇದರ ಸೇವನೆಯಿಂದ ಹತ್ತು ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ.

ಇದರಲ್ಲಿ ವಿಟಮಿನ್ ಎ, ಸಿ ಮತ್ತು ಐರನ್, ಪೊಟ್ಯಾಶಿಯಂಗಳು ಹೇರಳವಾಗಿದ್ದು ರೋಗವನ್ನು ನಿಯಂತ್ರಿಸುವ ಗುಣ ಇದಕ್ಕಿದೆ. ಹಾನಿಯಾದ ಜೀವಕೋಶಗಳನ್ನು ಇದು ಸರಿಪಡಿಸುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

ಸಕ್ಕರೆ ಕಾಯಿಲೆ ಇರುವವರಿಗೆ ಇದು ಹೇಳಿ ಮಾಡಿಸಿದ ಆಹಾರ. ತ್ವಚೆಯ ಅಲರ್ಜಿಯನ್ನೂ ಕಡಿಮೆ ಮಾಡುವ ಇದು ದೇಹದಲ್ಲಿರುವ ಫಂಗಸ್ ವಿರುದ್ಧ ಹೋರಾಡುತ್ತದೆ. ಹಾಗಲಕಾಯಿ ಪೇಸ್ಟ್ ಗೆ ಚಿಟಿಕೆ ಅರಶಿನ ಉದುರಿಸಿ ಮೊಣಕಾಲು ನೋವಿರುವೆಡೆ ಹಚ್ಚಿಕೊಳ್ಳಿ. ಸಂಪೂರ್ಣ ಒಣಗಿದ ಬಳಿಕ ತೊಳೆದರೆ ನೋವು ಸಹಜವಾಗಿಯೇ ಕಡಿಮೆಯಾಗುತ್ತದೆ. ಇದನ್ನು ವಾರಕ್ಕೆರಡು ಬಾರಿ ಹಚ್ಚಿಕೊಳ್ಳುವುದು ಬಹಳ ಒಳ್ಳೆಯದು.

ಸೊಪ್ಪಿನ ಬಳಕೆ ಹೆಚ್ಚು ಮಾಡುವುದರಿಂದಲೂ, ಉಪ್ಪನ್ನು ಕಡಿಮೆ ಸೇವಿಸುವುದರಿಂದಲೂ, ಮಾಂಸಾಹಾರದಿಂದ ದೂರವಿದ್ದಷ್ಟು ಗಂಟು ನೋವು ಬಹು ಬೇಗ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...