ಪ್ರಪಂಚದಾದ್ಯಂತ ಕೊರೊನಾ ಹೊಸ ರೂಪಾಂತರ ಒಮಿಕ್ರಾನ್ ಆತಂಕ ಮತ್ತು ಭಾರತದಲ್ಲಿ ಕ್ರಿಪ್ಟೋಕರೆನ್ಸಿಯ ಭವಿಷ್ಯದ ಬಗ್ಗೆ ನಡೆಯುತ್ತಿರುವ ಚರ್ಚೆಯ ನಡುವೆ ಕ್ರಿಪ್ಟೋ ಮಾರುಕಟ್ಟೆಯು ಶನಿವಾರ ಭಾರಿ ಪ್ರಕ್ಷುಬ್ಧತೆಗೆ ಸಾಕ್ಷಿಯಾಗಿದೆ.
ವರದಿ ಪ್ರಕಾರ, ಬಿಟ್‌ಕಾಯಿನ್ ಸೇರಿದಂತೆ ಇತರ ಕ್ರಿಪ್ಟೋಕರೆನ್ಸಿಗಳು ಶನಿವಾರ ತೀವ್ರವಾಗಿ ಕುಸಿದಿವೆ.
ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಪ್ಟೋ ಬಿಟ್‌ಕಾಯಿನ್ ಶೇಕಡಾ 17 ರಷ್ಟು ಕುಸಿತದೊಂದಿಗೆ ವಹಿವಾಟು ನಡೆಸಿತ್ತು. ಒಂದು ಹಂತದಲ್ಲಿ ಬಿಟ್‌ಕಾಯಿನ್ ಕಡಿಮೆ 42,000 ಡಾಲರ್ ತಲುಪಿತ್ತು. ಕ್ರಿಪ್ಟೋ ಕರೆನ್ಸಿಯ ಬೆಲೆ ಪ್ರತಿ ಬಿಟ್‌ಕಾಯಿನ್‌ಗೆ ಸುಮಾರು 31.70 ಲಕ್ಷ ರೂಪಾಯಿ ಇಳಿದಿದೆ.
ಆರಂಭದಲ್ಲಿ ಸುಮಾರು 10,000 ಡಾಲರ್ ಇಳಿಕೆ ನಂತ್ರ ಬಿಟ್‌ಕಾಯಿನ್ ಸ್ವಲ್ಪ ಚೇತರಿಕೆ ಕಂಡಿತ್ತು. ನಂತ್ರ 47700 ಡಾಲರ್ ತಲುಪಿತ್ತು. ವಿಶ್ವದ ಎರಡನೇ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎಥೆರಿಯಮ್ ಕೂಡ ಶೇಕಡಾ 15 ಇಳಿಕೆಯೊಂದಿಗೆ 3900 ಡಾಲರ್ ಮಟ್ಟಕ್ಕೆ ಇಳಿದಿದೆ. ಕೊರೊನಾ ಹೊಸ ರೂಪಾಂತರದ ನಂತ್ರ ಪ್ರಪಂಚದ ಎಲ್ಲ ಮಾರುಕಟ್ಟೆಯಲ್ಲಿ ಏರುಪೇರಾಗ್ತಿದ್ದು, ಕ್ರಿಪ್ಟೋ ಮಾರುಕಟ್ಟೆಯಲ್ಲೂ ಈ ಬದಲಾವಣೆ ಕಂಡಿದೆ.
ಬಿಟ್‌ಕಾಯಿನ್‌ನಲ್ಲಿ ಕುಸಿತ ಮುಂದುವರೆದಿದೆ. ನವೆಂಬರ್ 10 ರಂದು 69,000 ಡಾಲರ್ ಕುಸಿದಿದ್ದ ಬಿಟ್ ಕಾಯಿನ್ ಇಲ್ಲಿಯವರೆಗೆ ಸುಮಾರು 21,000 ಡಾಲರ್ ಕುಸಿತ ಕಂಡಿದೆ. ಪೇರು ಮಾರುಕಟ್ಟೆ ಹಾಗೂ ಬಿಟ್ ಕಾಯಿನ್ ಇಳಿಕೆ ಇನ್ನಷ್ಟು ದಿನ ಮುಂದುವರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.