ಬೆಂಗಳೂರು: ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಎಸ್ ಐಟಿ ತಂಡಕ್ಕೆ ತಾಂತ್ರಿಕ ಪರಿಣತಿ ತಂತ್ರಜ್ಞರ ತಂಡ ರಚಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಹಗರಣದ ತನಿಖೆಗೆ ಸಿಐಡಿ ಎಸ್ ಐಟಿ ತಜ್ಞರ ತಂಡ ನೇಮಕ ಮಾಡುವ ಅಗತ್ಯದ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಸೈಬರ್ ಫೊರೆನ್ಸಿಕ್ ಹಾಗೂ ಕ್ರಿಪ್ಟೊ ಕರೆನ್ಸಿ ತಜ್ಞರ ತಂಡವನ್ನು ನೇಮಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ತಜ್ಞರ ತಂಡ ನೇಮಕದ ಜೊತೆಗೆ ಗರಿಷ್ಠ 50 ಲಕ್ಷದವರೆಗೂ ಸೇವಾಶುಲ್ಕವಾಗಿ ಪಾವತಿಸಲು ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಟ್ ಕಾಯಿನ್ ಹಾಗೂ ಕ್ರೊಪ್ಟೊ ಕರೆನ್ಸಿ ಹಗರಣದ ತನಿಖೆಗೆ ತಜ್ಞರ ತಂಡ ನೇಮಕ ಮಾಡಲು ಎಸ್ ಐಟಿ ಮುಂದಾಗಿದೆ.